ಚುನಾವಣೆ ಹೊತ್ತಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್ ಆಗಿದ್ದಕ್ಕೆ ಕೋಟ್ಯಾಂತರ ರೂ. ನಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಎರಡನೇ ಹಂತದ ಚುನಾವಣೆಯನ್ನು ಲೆಕ್ಕ ಹಾಕುತ್ತಿದ್ದಂತೆ ಬಾರ್ ಮಾಲೀಕರು ತಮ್ಮ ಲಾಭ-ನಷ್ಟವನ್ನು ಲೆಕ್ಕ ಹಾಕುವುದರಿಂದ ಕಂಗಾಲಾಗಿದ್ದಾರೆ. ಚುನಾವಣೆ ಮುಗಿದು ಬಾರ್ ಮುಚ್ಚಿದ್ದರಿಂದ ಎರಡು ದಿನದಲ್ಲಿ 300 ಕೋಟಿ ರೂ.ನಷ್ಟ ಉಂಟಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎರಡು ದಿನ ರಾಜ್ಯದಲ್ಲಿ ಬಾರ್ ಬಂದ್ ಮಾಡಲಾಗಿತ್ತು, ಏ.24ರ ಸಂಜೆಯಿಂದ 26ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಬಾರ್ ಮಾಲೀಕರಿಗೆ ಕೋಟಿ ರೂ. ನಷ್ಟ ಇದರಿಂದ ರಾಜ್ಯ ಸರ್ಕಾರದ ರಾಜಸ್ವ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ.

ಇನ್ನು ಎರಡನೇ ಹಂತದ ಎಲೆಕ್ಷನ್ ಗೆ ಮತ್ತೆ ನಷ್ಟದ ಭೀತಿ ಎದುರಾಗಿದ್ದು, ಎರಡು ದಿನ ಬಾರ್ ಬಂದ್ ಮಾಡುವ ಬದಲು ಚುನಾವಣಾ ದಿನದಂದು ಮಾತ್ರ ಬಾರ್ ಬಂದ್ ಮಾಡುವಂತೆ ಬಾರ್ ಮಾಲೀಕರ ಸಂಘ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಎರಡು ದಿನ ಬಾರ್ ಗಳು ಬಂದ್ ಆಗಿರುವುದರಿಂದ ಬಾರ್ ಮಾಲೀಕರು ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಚುನಾವಣೆ ದಿನ ಮಾತ್ರ ಬಂದ್ ಮಾಡುವಂತೆ ಮದ್ಯವ್ಯಸನಿಗಳು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!