ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ತುಮಕೂರು ಡಿವೈಎಸ್ಪಿ ಚಂದ್ರಶೇಖರ ಹಾಗೂ ಸೋಮಣ್ಣ ನಡುವೆ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ನೀಡುವ ಕುರಿತು ವಾಗ್ವಾದ ನಡೆದಿದೆ.
‘ಏನ್ ತಮಾಷೆ ಮಾಡ್ತಿದ್ದೀರಾ’ ಎಂದು ಸೋಮಣ್ಣ ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ‘ತಮಾಷೆ ಏನಿಲ್ಲ, ಐವರಿಗೆ ಮಾತ್ರ ಅವಕಾಶ ಅಷ್ಟೇ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತಾವನೆ ದಾಖಲೆಗಳನ್ನು ಅಭ್ಯರ್ಥಿಗಳು ಸೇರಿದಂತೆ 5 ಜನರು ಸಲ್ಲಿಸಬಹುದು. ನಾಮನಿರ್ದೇಶನ ನಮೂನೆಗಳಲ್ಲಿ 3 ಸೆಟ್‌ಗಳಿವೆ. ದಯವಿಟ್ಟು ಮುಖಂಡರನ್ನು ಬಿಡಿ” ಎಂದು ಸೋಮಣ್ಣ ಕೇಳಿದ್ದಾರೆ. ಇದಕ್ಕೆ ಪೊಲೀಸರು “ಇಲ್ಲ ಸರ್, ನಾವು ಎಲ್ಲರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದು ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.