ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು ಆರಂಭಗೊಂಡಿದೆ.
ಮರಳು ಮೂಟೆ ಹೊರಿಸುವ ಮೂಲಕ ಜಂಬೂ ಸವಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮರಳು ಮೂಟೆ ಹೊರಿಸುವ ಮುನ್ನ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಸರಾ ಗಜಪಡೆಗೆ, ಗಾದಿ, ನಮ್ದಾ, ತೊಟ್ಟಿಲು, ಹಗ್ಗ ಹಾಗೂ ಮರಳು ಮೂಟೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಲಕ್ಷ್ಮೀ ಹಾಗೂ ವರಲಕ್ಷ್ಮೀ ಆನೆಗಳಿಗೆ ಸಾಂಕೇತಿಕವಾಗಿ ಡಿಸಿಎಫ್ ಡಾ.ಐ.ಬಿ ಪ್ರಭುಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು