ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋರಮಂಗಲ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 1205 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಜುಲೈ 24ರಂದು ಕೋರಮಂಗಲದ ಪಿಜಿಗೆ ನುಗ್ಗಿ ಕೃತಿಕುಮಾರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಮಧ್ಯಪ್ರದೇಶದ ಬೇಗಂಗಂಜ್ ಮೂಲದ ಅಭಿಷೇಕ್ ಘೋಷಿ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿ ಜುಲೈ.26 ರಂದು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ 85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಪೇಯಿಂಗ್ ಗೆಸ್ಟ್ ಮಾಲೀಕರ ಹೇಳಿಕೆಗಳೂ ಇವೆ ಎಂದು ತಿಳಿದುಬಂದಿದೆ.
ಮೃತಪಟ್ಟ ಕೃತಿ ಕುಮಾರಿಯ ಸ್ನೇಹಿತೆ ಹಾಗೂ ಕೊಲೆ ಆರೋಪಿ ಅಭಿಷೇಕ್ ಪ್ರೀತಿಸುತ್ತಿದ್ದರು, ಆದರೆ ಪ್ರೀತಿ ಉಸಿರುಗಟ್ಟಿಸಿ ಆಕೆಯ ಸ್ನೇಹಿತೆ ದೂರಾಗಲು ಬಯಸಿದ್ದಳು ಎನ್ನಲಾಗಿದೆ. ಅದಕ್ಕೆ ಕೃತಿ ಸಹಾಯ ಮಾಡಿದ್ದು, ಸಿಟ್ಟಿಗೆದ್ದ ಅಭಿಷೇಕ್ ಕೃತಿ ಜೀವ ತೆಗೆದಿದ್ದಾನೆ.