ದಸರಾ ಮಹೋತ್ಸವ: ಇಂದಿನಿಂದ ವಿವಿಧ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಸೌರಭ

ಹೊಸದಿಗಂತ ವರದಿ ಮೈಸೂರು:

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಸಾಂಸ್ಕೃತಿಕ ಉಪಸಮಿತಿ ವತಿಯಿಂದ ಅಕ್ಟೋಬರ್ 15 ರಿಂದ 23ರ ವರೆಗೆ ಪ್ರತಿನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಆಯೋಜಿಸಲಾಗಿದೆ.

ಮೈಸೂರಿನ ಜಗನ್ಮೋಹನ್ ಅರಮನೆಯ ವೇದಿಕೆ, ಕರ್ನಾಟಕ ಕಲಾಮಂದಿರ, ನಗರದ ಚಿಕ್ಕ ಗಡಿಯಾರದ ವೇದಿಕೆ, ಪುರಸಭೆ ವೇದಿಕೆ, ಕುವೆಂಪು ನಗರದ ಗಾನಭಾರತೀ ವೇದಿಕೆ, ಲಕ್ಷ್ಮಿಪುರಂನ ಶ್ರೀ ನಾದಬ್ರಹ್ಮ ಸಂಗೀತ ಸಭಾ ವೇದಿಕೆ, ಕಿರು ರಂಗಮoದಿರ, ರಾಮಕೃಷ್ಣನಗರದ ನಟನ ರಂಗ ಮತ್ತು ರಮಾಗೋವಿಂದ ರಂಗಮಂದಿರ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಉಪಸಮಿತಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!