ಮುಂಬೈನ ರಸ್ತೆಯಲ್ಲಿ ಫ್ಲಿಪ್‌ಕಾರ್ಟ್ ಟ್ರಕ್‌ನಿಂದ ದುಡ್ಡಿನ ಮಳೆ ಸುರೀತು! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಗರದ ರಸ್ತೆಗಳ ಮೇಲೆ ದುಡ್ಡಿನ ಮಳೆ ಸುರಿದಿದೆ.
ಹೌದು, ಫ್ಲಿಪ್‌ಕಾರ್ಟ್‌ನ ಟ್ರಕ್‌ನಿಂದ ಎರಡು ಸಾವಿರ ರೂಪಾಯಿ ನೋಟುಗಳ ಮಳೆ ಸುರಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ಲಿಪ್‌ಕಾರ್ಟ್ ವಾಹನ ಹಿಂಬಾಗಿಲು ತೆರೆದಿದ್ದು, ಗಾಳಿಗೆ ನೋಟುಗಳು ಹಾರಿವೆ, ಜನರು ಆಶ್ಚರ್ಯಚಕಿತರಾಗಿ ನೋಡಿದ್ದಾರೆ. ಇದು ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಅಥವಾ ಆಕಸ್ಮಿಕವಾಗಿ ಆದ ನಿಜಘಟನೆಯೋ ತಿಳಿದುಬಂದಿಲ್ಲ.

ಈ ಬಗ್ಗೆ ಫ್ಲಿಪ್‌ಕಾರ್ಟ್ ಟ್ವೀಟ್ ಮಾಡಿದ್ದು, ಈ ಮಳೆಯಾಗುತ್ತಿರುವುದು ನಮಗೆ ಗೊತ್ತಾಗಿಲ್ಲ, ಎಲ್ಲರೂ ಮೆಸೇಜ್ ಮಾಡಿ ಏನಾಯ್ತು ಎಂದು ಕೇಳ್ತಿದ್ದಾರೆ, ಈ ಪದಬಂಧವನ್ನು ಬಿಡಿಸ್ತಿದ್ದೇವೆ ಎಂದಿದ್ದಾರೆ.

https://x.com/Flipkart/status/1710514479841280404?s=20

 

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!