ಅಸ್ವಸ್ಥಗೊಂಡು ಆಸ್ಪತ್ರೆಗೆ ಬಂದ ದ್ಯಾಮಪ್ಪ ಅವರ ಹೊಟ್ಟೆಯಲ್ಲಿತ್ತು ಬರೋಬ್ಬರಿ 187 ನಾಣ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ವಸ್ಥಗೊಂಡು ಆಸ್ಪತ್ರಗೆ ಬಂದಿದ್ದ ವ್ಯಕ್ತಿಯೋರ್ವರ ದೇಹದಿಂದ ವೈದ್ಯರ ತಂಡ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದೆ!
ಈ ಅಚ್ಚರಿಯ ಘಟನೆ ಬಾಗಲಕೋಟೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ದ್ಯಾಮಪ್ಪ ಎಂಬ 58 ವರ್ಷದ ವ್ಯಕ್ತಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮನೆಮಂದಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಪ್ರಾಥಮಿಕ ಪರೀಕ್ಷೆಗಳಲ್ಲಿ ಸ್ಪಷ್ಟತೆ ಸಿಗದ ಕಾರಣ ತಜ್ಞ ವೈದ್ಯರ ತಂಡ ಎಂಡೋಸ್ಕೋಪಿ ನಡೆಸಲು ನಿರ್ಧರಿಸಿತು. ಪರೀಕ್ಷಾ ವರದಿ ಬಂದಾಗ ಖುದ್ದು ವೈದ್ಯರೇ ಹೈರಾಣಾಗಿದ್ದರು. ಈ ವ್ಯಕ್ತಿಯ ಹೊಟ್ಟೆಯಲ್ಲಿ ಬರೋಬ್ಬರಿ 187 ನಾಣ್ಯಗಳು ಕಂಡುಬಂದಿದ್ದವು. ತಕ್ಷಣ ಆಪರೇಷನ್ ನಡೆಸುವ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಯಿತು. 5 ರೂ. ಮುಖಬೆಲೆಯ 56, 2 ರೂ. ಮುಖಬೆಲೆಯ 51, 1 ರೂ. ಮುಖಬೆಲೆಯ 80 ನಾಣ್ಯಗಳು ದ್ಯಾಮಪ್ಪ ಅವರ ದೇಹದಲ್ಲಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!