Saturday, December 9, 2023

Latest Posts

ಹಿಂದೆ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಇತ್ತು: 20 ವರ್ಷಗಳ ಹಿಂದಿನ ಸ್ಥಿತಿಯನ್ನು ನೆನೆಸಿಕೊಂಡ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ ಯಶಸ್ಸನ್ನು ಈಗ ಜಗತ್ತೇ ನೋಡುತ್ತಿದೆ, ಅದರೆ 20 ವರ್ಷಗಳ ಹಿಂದೆ ಈಗಿನ ಪರಿಸ್ಥಿತಿ ಇರಲಿಲ್ಲ. ಈ ಹಿಂದೆ ಕಾರ್ಯಕ್ರಮ ಪ್ರಾರಂಭವಾದಾಗ ಅಂದಿನ ಕೇಂದ್ರ ಸರಕಾರ ಯಾವುದೇ ಸಹಕಾರ ನೀಡದೆ ರಾಜ್ಯದ ಪ್ರತಿಷ್ಠೆಯನ್ನು ಕೆಡಿಸುವ ಪ್ರಯತ್ನಗಳನ್ನು ಮಾಡಿದರು ಎಂದು ಪ್ರಧಾನಿ ಮೋದಿ ಹೇಳಿದರು.

ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ-ಗತಿಯನ್ನು ಸ್ಮರಿಸಿದರು..ʻಈ ಹಿಂದೆ ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದವರು ಗುಜರಾತ್‌ನ ಅಭಿವೃದ್ಧಿಯನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದರು. ಆಗಿನ ಕೇಂದ್ರ ಸರ್ಕಾರದ ಮಂತ್ರಿಗಳು ವೈಬ್ರೆಂಟ್ ಗುಜರಾತ್‌ಗೆ ಬರಲು ನಿರಾಕರಿಸುತ್ತಿದ್ದರಲ್ಲದೆ, ಬರುವ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕುತ್ತಿದ್ದರು ಎಂಬುದಾಗಿ ತಿಳಿಸಿದರು.

ಶೃಂಗಸಭೆಯ 20 ವರ್ಷಗಳು ರಾಜ್ಯದ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ʻಪ್ರಮುಖ ಮೈಲಿಗಲ್ಲುʼ ಎಂದು ಬಣ್ಣಿಸಿದರು.
ವೈಬ್ರೆಂಟ್ ಗುಜರಾತ್ ಪ್ರಾರಂಭವಾದಾಗ, ವಿದೇಶಿ ಅತಿಥಿಗಳು ಉಳಿಯಲು ಗುಜರಾತ್‌ನಲ್ಲಿ ಯಾವುದೇ ದೊಡ್ಡ ಹೋಟೆಲ್‌ಗಳು ಇರಲಿಲ್ಲ. ಸರ್ಕಾರಿ ಅತಿಥಿ ಗೃಹಗಳು ಸಹ ಭರ್ತಿಯಾಗುತ್ತಿದ್ದವು ಮತ್ತು ನಾವು ವಿಶ್ವವಿದ್ಯಾಲಯದ ಅತಿಥಿ ಗೃಹಗಳನ್ನು ಸಹ ಬಳಸಿದ್ದೇವೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಾವು ಗುಜರಾತ್ ಅನ್ನು ಪುನರಾಭಿವೃದ್ಧಿ ಮಾಡಿದ್ದು ಮಾತ್ರವಲ್ಲದೆ ಅದರ ಭವಿಷ್ಯದ ಬಗ್ಗೆಯೂ ಯೋಚಿಸಿದ್ದೇವೆ. ‘ವೈಬ್ರೆಂಟ್ ಗುಜರಾತ್’ ಅನ್ನು ಗುಜರಾತಿನ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ವಾಹಿನಿಯಾಗಿ ಮತ್ತು ಜಗತ್ತಿನ ಕಣ್ಣಿಗೆ ಕಣ್ಣಿಟ್ಟು ಮಾತನಾಡುವ ವಾಹಿನಿಯಾಗಿ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!