ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಯರ್‌ಫೋನ್ ಬಳಕೆದಾರರೇ ಇಲ್ಲಿ ಗಮನಿಸಿ.. ಯುವತಿಯೊಬ್ಬಳು ಇಯರ್ ಬಡ್ನಲ್ಲಿ ಹಾಡು ಆಲಿಸುತ್ತಿರುವಾಗ ಕಿವಿಯಲ್ಲಿಯೇ ಸ್ಫೋಟಗೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
ಟರ್ಕಿ ಮೂಲದ ವ್ಯಕ್ತಿ ಈ ಘಟನೆಯನ್ನು ಹಂಚಿಕೊಂಡಿದ್ದು, ಸ್ಫೋಟದಿಂದಾಗಿ ಯುವತಿ ಸಂಪೂರ್ಣವಾಗಿ ಶ್ರವಣದೋಷ ಅನುಭವಿಸುತ್ತಿದ್ದಾಳೆ ಎಂದು ಹೇಳಲಾಗಿದೆ.
ಯುವತಿ ಕಡಿಮೆ ಚಾರ್ಜ್‌ನಲ್ಲಿರುವ ಇಯರ್‌ಬಡ್‌ನ್ನು ಬಳಕೆ ಮಾಡಿ ಕಿವಿಗೆ ಹಾಕಿಕೊಂಡು ಹಾಡು ಕೇಳಿದ್ದಾಳೆ. ಸ್ವಲ್ಪ ಸಮಯದ ನಂತರ ಇಯರ್ ಬಡ್ ಬ್ಲಾಸ್ಟ್ ಆಗಿದ್ದು, ಯುವತಿಗೆ ಕಿವಿ ಕೇಳಿಸುತ್ತಿಲ್ಲ. ಘಟನೆಯ ಬಳಿಕ ಯುವತಿಯ ಕಡೆಯವರು ಸ್ಥಳೀಯ ಇಯರ್‌ಬಡ್ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಸ್ಫೋಟಗೊಂಡ ಇಯರ್‌ಬಡ್ ಅನ್ನು ತೋರಿಸಿದರು. ಇದನ್ನು ಕಂಡೊಡನೆ ಅಚ್ಚರಿಗೊಂಡರು. ಜೊತೆಗೆ ಕ್ಷಮೆಯಾಚಿಸಿದರು. ಬಳಿಕ ಹೊಸ ಇಯರ್ಬಡ್ಸ್ ಕೊಟ್ಟರು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.