ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ಇಂದು ಬೆಳಗಿನ ಜಾವ 04:43 ಕ್ಕೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.
NCS ಪ್ರಕಾರ, ಭೂಕಂಪವು 75 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಆದರೆ ಯಾವುದೇ ರೀತಿಯ ಮಾನಹಾನಿ ಸಂಭವಿಸಿಲ್ಲ ಎಂದು ತಿಳಿಸಿದೆ.
ಇನ್ನು ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 35.83 ಉತ್ತರ, ರೇಖಾಂಶ 70.60 ಪೂರ್ವದಲ್ಲಿ ಸಂಭವಿಸಿದೆ ಎಂದು ಹೇಳಿದೆ.