ಕೊಡಗಿನ ವಿವಿಧೆಡೆ ಮತ್ತೆ ನಡುಗಿದ ಭೂಮಿ, ಜನರ ಆತಂಕ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಹಲವೆಡೆ ಮಂಗಳವಾರ ಮತ್ತೆ ಭೂಮಿ ಕಂಪಿಸಿದೆ. ಮಂಗಳವಾರ ಬೆಳ್ಳಂಬೆಳಗ್ಗೆ 7.45ರ ಸುಮಾರಿಗೆ‌ ಕೊಡಗು ಜಿಲ್ಲೆಯ ಮಡಿಕೇರಿ, ಮುಕ್ಕೋಡ್ಲು, ನಾಪೋಕ್ಲು, ಬಲ್ಲಮಾವಟಿ, ಭಾಗಮಂಡಲ, ಕರಿಕೆ, ಸಂಪಾಜೆ ಸಮೀಪದ ದಬ್ಬಡ್ಕ, ಪೆರಾಜೆ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ಕ್ಷಣ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಹೇಳಲಾಗಿದೆ.

ಜಿಲ್ಲೆಯಲ್ಲಿ ಒಂದು ವಾರದಲ್ಲಿ ಇದು ಮೂರನೇ ಬಾರಿಗೆ ಭೂಕಂಪನದ‌ ಅನುಭವವಾಗಿದ್ದು, ಗುಡ್ಡಗಾಡು ಪ್ರದೇಶದಲ್ಲಿರುವ ಜನತೆ ಆತಂಕಕ್ಕೆ‌ ಒಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!