ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4ರಷ್ಟಿತ್ತು. ಭೂಕಂಪದ ನಂತರ ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಮಿಯು ಕೆಲವು ಸೆಕೆಂಡುಗಳ ಕಾಲ ಕಂಪಿಸಿದ ಅನುಭವದಿಂದ ಜನ ಭಯಭೀತರಾಗಿದ್ದಾರೆ. ಈ ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಲೀ, ಆಸ್ತಿಪಾಸ್ತಿಯಾಗಲೀ ಸಂಭವಿಸಿಲ್ಲ ಎಂಬುದು ವರದಿಯಾಗಿದೆ.
ಭೂಕಂಪದ ಕೇಂದ್ರಬಿಂದು ದೋಡಾದ ಗಂಡೋ ಭಲೇಸಾ ಗ್ರಾಮದಿಂದ 18 ಕಿ.ಮೀ ದೂರದಲ್ಲಿ 30 ಕಿ.ಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪದ ಪ್ರಭಾವದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ, ಎನ್‌ಸಿಆರ್ ಮತ್ತು ಪಂಜಾಬ್ ಸೇರಿದಂತೆ ಹಲವು ಉತ್ತರ ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿವೆ. ದೆಹಲಿಯಲ್ಲಿ 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು.