ನೇಪಾಳದಲ್ಲಿ ಭೂಕಂಪನ: 6.2 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ.

ನೋಯ್ಡಾ ಸೆಕ್ಟರ್ 75ರ ಹಲವೆಡೆ ಕಂಪಿಸಿದ ದೃಶ್ಯಗಳು ದಾಖಲಾಗಿವೆ. ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ನೇಪಾಳದಲ್ಲಿ ಇಂದು ಎರಡು ಭೂಕಂಪನ ನಡೆದಿದ್ದು, ಮಧ್ಯಾಹ್ನ 2.24ಕ್ಕೆ 10 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್​ ಮಾಪನದಲ್ಲಿ 4.6 ತೀವ್ರತೆಯೊಂದಿಗೆ ಮೊದಲ ಕಂಪನ ದಾಖಲಾಗಿದೆ. ಮತ್ತೊಂದು ಕಂಪನ ಮಧ್ಯಾಹ್ನ 2.51ರ ಸುಮಾರಿಗೆ ಸಂಭವಿಸಿತು. ಇದರ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 6.2ರಷ್ಟು ದಾಖಲಾಗಿದೆ .

ಇದರ ಪರಿಣಾಮ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್​) ಸೇರಿದಂತೆ ಉತ್ತರ ಭಾರತದ ಹಲವೆಡೆ ಬಲವಾದ ಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಉಂಟಾದ ಪ್ರಬಲ ಕಂಪನದ ನಂತರ ಇಲ್ಲಿನ ಜನರಿಗೆ ಭೂಮಿ ನಡುಗಿರುವ ಅನುಭವ ಆಗಿದೆ. ಕಚೇರಿಗಳು ಹಾಗೂ ಎತ್ತರ ಕಟ್ಟಡಗಳಲ್ಲಿ ನೆಲೆಸಿದ್ದವರು ಹೊರಗಡೆ ಓಡಿ ಬಂದಿದ್ದಾರೆ. ಜನತೆ ಗಾಬರಿಯಾಗುವುದು ಬೇಡ ಎಂದು ಪೊಲೀಸರು ಮನವಿ ಮಾಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!