ಹೊಸದಿಗಂತ ವರದಿ ವಿಜಯಪುರ:
ಗುಮ್ಮಟನಗರಿಯಲ್ಲಿ ಬುಧವಾರ ರಾತ್ರಿ ಭಾರಿ ಸದ್ದಿನೊಂದಿಗೆ ಲಘು ಭೂಕಂಪನವಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ನಗರದಲ್ಲಿ ಬುಧವಾರ ರಾತ್ರಿ 11.42 ಕ್ಕೆ ಹಾಗೂ ಗುರುವಾರ ಬೆಳಗ್ಗೆ 6.19ಕ್ಕೆ ಭೂಮಿ ಕಂಪಿಸಿದ್ದು, ಜನರು ಆತಂಕಗೊಳ್ಳುವಂತಾಗಿದೆ.
ನಗರದ ಶಿಕಾರಖಾನೆ, ರೇಲ್ವೆಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ನಿವಾಸಿಗಳಿಗೆ ಭೂ ಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ.