ಆಫ್ಘನ್‌ಗೆ ಮತ್ತೆ ವಕ್ಕರಿಸಿದ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುರುವಾರ ಮಧ್ಯರಾತ್ರಿ ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಕಾಬೂಲ್‌ನಲ್ಲಿ ಮಧ್ಯರಾತ್ರಿ 1.09ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಇದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ನಾಲ್ಕನೇ ಭೂಕಂಪವಾಗಿದೆ. ಪ್ರಸ್ತುತ ಸಂಭವಿಸಿರುವ ವಿಪತ್ತಿನಿಂದ ಉಂಟಾದ ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಹೆರಾತ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದಾಗಿ 4 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 15 5.4ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಕ್ಟೋಬರ್ 13 ರಂದು 4.6, ಅಕ್ಟೋಬರ್ 11 ರಂದು 6.1 ರ ತೀವ್ರತೆಯೊಂದಿಗೆ  ಸಂಭವಿಸಿದ ಭೂಕಂಪಗಳು ಆಫ್ಘಾನಿಸ್ತಾನವನ್ನು ಅಕ್ಷರಶಃ ಸ್ಮಶಾನ ಮಾಡಿದೆ. ಎತ್ತ ನೋಡಿದರೂ ಕುಸಿದ ಕಟ್ಟಡದ ಅವಶೇಷಗಳೇ ಕಂಡುಬರುತ್ತಿವೆ. ಚೇತರಿಕೆ ಕಾಣುವ ಮುನ್ನವೇ ಒಂದರ ಹಿಂದೆ ಮತ್ತೊಂದರಂತೆ ಭೂಕಂಪ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ ಆಫ್ಘಾನಿಸ್ತಾನ.

ಹೆರಾತ್‌ನ 20 ಹಳ್ಳಿಗಳಲ್ಲಿ 1,983 ಮನೆಗಳು ನಾಶವಾಗಿವೆ ಎಂದು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ವಿಪತ್ತು ನಿರ್ವಹಣಾ ಸಚಿವಾಲಯ ಪ್ರಕಟಿಸಿದೆ. ಹೆರಾತ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ತಾಲಿಬಾನ್ ಸರ್ಕಾರ ಇನ್ನೂ ಅಂದಾಜು ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!