ಪೆಸಿಫಿಕ್ ಕರಾವಳಿಯಲ್ಲಿ ಪ್ರಬಲ ಭೂಕಂಪ: 6.5 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲ್ ಸಾಲ್ವಡಾರ್‌ನ ಪೆಸಿಫಿಕ್ ಕರಾವಳಿಯಲ್ಲಿ ಬುಧವಾರ ಮುಂಜಾನೆ ಭಾರಿ ಭೂಕಂಪ ಸಂಭವಿಸಿದೆ. ನಂತರ ಮತ್ತೊಮ್ಮೆ ಬೆಳಗಿನ ಜಾವ 5.52ಕ್ಕೆ ಎರಡನೇ ಭೂಕಂಪ ಸಂಭವಿಸಿರುವುದಾಗಿ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಬಹಿರಂಗಪಡಿಸಿದೆ. ಭೂಕಂಪದಿಂದಾಗಿ ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಎಲ್ ಸಾಲ್ವಡಾರ್‌ನ ಪರಿಸರ ಸಚಿವಾಲಯ ತಿಳಿಸಿದೆ.

ಸುಮಾರು 70 ಕಿಲೋಮೀಟರ್ ಆಳದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. (ಭೂಕಂಪ) ಈ ಭೂಕಂಪದಿಂದ ಯಾವುದೇ ಹಾನಿಯ ವರದಿಯಾಗಿಲ್ಲ. ನಿನ್ನೆ ಸಂಜೆ ಕೂಡ ಭೂಕಂಪದ ವರದಿಯಾಗಿದ್ದು, ಸರಣಿ ಭೂಕಂಪಕ್ಕೆ ಸ್ಥಳೀಯ ಜನ ಭಯಬೀತರಾದರು. ಯಾವುದೇ ಅನಾಹುತ ಸಂಭವಿಸದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ರಾಜಧಾನಿ ಸ್ಯಾನ್ ಸಾಲ್ವಡಾರ್ ಬಳಿಯ ಕರಾವಳಿ ನಗರವಾದ ಲಾ ಲಿಬರ್ಟಾಡ್‌ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನಿಕರಾಗುವಾ, ಹೊಂಡುರಾಸ್, ಗ್ವಾಟೆಮಾಲಾ ಮತ್ತು ಬೆಲೀಜ್‌ನಲ್ಲಿಯೂ ಭೂಕಂಪ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!