October 10, 2026
Saturday, October 10, 2026
spot_img

ಜಪಾನ್‌ನಲ್ಲಿ ನಡುಗಿದ ಧರೆ: 7.4 ತೀವ್ರತೆಯ ಭೂಕಂಪ, ಕರಾವಳಿ ಜನರಿಗೆ ‘ಹೈ ಅಲರ್ಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪದ ಆತಂಕ ಎದುರಾಗಿದೆ. ಸೋಮವಾರ ಸಂಜೆ ಉತ್ತರ ಜಪಾನ್‌ನ ಇವಾಟೆ ಪ್ರಾಂತ್ಯದ ಪೆಸಿಫಿಕ್ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.4 ರಷ್ಟು ದಾಖಲಾಗಿದ್ದು, ಸಮುದ್ರದಲ್ಲಿ ಸುಮಾರು 10 ಅಡಿ ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಹವಾಮಾನ ಸಂಸ್ಥೆ ಕಟ್ಟೆಚ್ಚರ ಘೋಷಿಸಿದೆ.

ಸಂಜೆ 4:53ಕ್ಕೆ ಸಂಭವಿಸಿದ ಈ ಭೂಕಂಪದ ಕಂಪನವು ಎಷ್ಟು ಪ್ರಬಲವಾಗಿತ್ತೆಂದರೆ, ನೂರಾರು ಕಿಲೋಮೀಟರ್ ದೂರದ ರಾಜಧಾನಿ ಟೋಕಿಯೊದ ಬಹುಮಹಡಿ ಕಟ್ಟಡಗಳೂ ನಡುಗಿವೆ. ಕರಾವಳಿ ತೀರದ ಜನರಿಗೆ ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಜಪಾನ್ ಭೌಗೋಳಿಕವಾಗಿ ‘ರಿಂಗ್ ಆಫ್ ಫೈರ್’ ವಲಯದಲ್ಲಿದ್ದು, ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲೆ ಸ್ಥಿತವಾಗಿದೆ. ಹೀಗಾಗಿ ಇಲ್ಲಿ ವರ್ಷಕ್ಕೆ ಸರಾಸರಿ 1,500 ಕ್ಕೂ ಹೆಚ್ಚು ಕಂಪನಗಳು ಸಂಭವಿಸುತ್ತವೆ. ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಶೇ. 18ರಷ್ಟು ಜಪಾನ್‌ನಲ್ಲೇ ನಡೆಯುವುದು ವಿಶೇಷ. 2011ರಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪ ಮತ್ತು ಸುನಾಮಿ ಸುಮಾರು 18,500 ಜನರನ್ನು ಬಲಿಪಡೆದಿತ್ತು.

Must Read