ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ಜನತೆ ಅಕ್ಷರಶಃ ತತ್ತರಿಸಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸಧ್ಯ 19,300 ದಾಟಿದೆ.
ಫೆಬ್ರವರಿ 6ರಂದು ಸಂಭವಿಸಿದ ಭೂಕಂಪವು ಪಶ್ಚಿಮ ಏಷ್ಯಾದ ದೇಶ ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಹಾನಿಯನ್ನುಂಟು ಮಾಡಿದೆ. ಇಲ್ಲಿಯವರೆಗೆ, ಈ ಎರಡು ದೇಶಗಳಲ್ಲಿ 19 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಗಾಯಗೊಂಡವರ ಸಂಖ್ಯೆ 40 ಸಾವಿರಕ್ಕೆ ತಲುಪಿದೆ.
ಹಿಮಪಾತ ಮತ್ತು ಮಳೆಯ ನಡುವೆ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನ ರಕ್ಷಿಸುವ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಟರ್ಕಿ ಸರ್ಕಾರ ಒಪ್ಪಿಕೊಂಡಿದೆ.