ತಲೆ ಮರೆಸಿಕೊಂಡಿರುವ ನಟಿ ಅಭಿನಯ: ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಲೆ ಮರೆಸಿಕೊಂಡಿರುವ ನಟಿ ಅಭಿನಯ ಕುಟುಂಬಕ್ಕೆ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ತಲೆ ಮರೆಸಿಕೊಂಡಿರುವ ನಟಿ ಅಭಿನಯ, ಅವರ ತಾಯಿ ಮತ್ತು ಸಹೋದರ ವರದಕ್ಷಿಣೆ ಕಿರುಕುಳ ಹಿನ್ನೆಲೆ ಅಭಿನಯಾ ಅವರ ಅತ್ತಿಗೆ ವರಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದರು.

ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಪೊಲೀಸರು ಅಪರಾಧಿಗಳನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಬೇಕಿದ್ದು, ಆದರೆ ಪೊಲೀಸರಿಗೆ ಸಿಗದೇ ನಟಿ ಅಭಿನಯ, ಅವರ ತಾಯಿ, ಸಹೋದರ ತಲೆಮರೆಸಿಕೊಂಡಿದ್ದಾರೆ.

ಅಭಿನಯ, ತಾಯಿ ಜಯಮ್ಮ, ಸಹೋದರ ಚೆಲುವರಾಜು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೂವರು ಅಪರಾಧಿಗಳ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!