ದೆಹಲಿಯಲ್ಲಿ ಮತ್ತೊಮ್ಮೆ ಭೂಕಂಪನ: 5.4 ತೀವ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವ ಉಂಟಾಗಿದೆ. ರಿಕ್ಟರ್​ ಮಾಪನದಲ್ಲಿ 5.4ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ.
ದೆಹಲಿಯಲ್ಲಿ ಒಂದು ವಾರದ ಅವಧಿಯಲ್ಲಿ ಇದು ಎರಡನೇ ಭಾರಿಗೆ ಭೂಮಿ ಕಂಪಿಸುತ್ತಿರುವ ಪ್ರಕರಣವಾಗಿದೆ.  ದೆಹಲಿ, ನೊಯಿಡಾ ಸೇರಿದಂತೆ ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲೂ ಭೂಮಿ ಕಂಪಿಸಿದೆ. ಜನರು ಭಯದಲ್ಲಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಭೂಕಂಪನದ ಕೇಂದ್ರವು ನೇಪಾಳದಲ್ಲಿ 5.4 ರಷ್ಟಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.
“ಕಳೆದ ಮೂರು ದಿನಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯೊಂದಿಗೆ ನೇಪಾಳದಲ್ಲಿ ಇದು ಐದನೇ ಭೂಕಂಪವಾಗಿದೆ” ಎಂದು ಪ್ರಾಧಿಕಾರ ತಿಳಿಸಿದೆ.
ಇದು ಈ ವಾರದ ಆರಂಭದಲ್ಲಿ ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಅನುಭವಿಸಿದ ಭೂಕಂಪದ ತೀವ್ರತೆಗಿಂತ ಕಡಿಮೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!