September 29, 2026
Tuesday, September 29, 2026
spot_img

FOOD | ಘಮಘಮಿಸುವ ಬೆಳ್ಳುಳ್ಳಿ ಅನ್ನ ಮಾಡುವ ಸುಲಭ ರೆಸಿಪಿ ಇಲ್ಲಿದೆ

ಬೆಳ್ಳುಳ್ಳಿ ಅನ್ನ ಅಥವಾ ಗಾರ್ಲಿಕ್ ರೈಸ್ ಕೇವಲ ರುಚಿಗಷ್ಟೇ ಅಲ್ಲದೆ, ಇದು ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದು, ದಕ್ಷಿಣ ಭಾರತದಲ್ಲಿ ಇದು ಬಹಳ ಜನಪ್ರಿಯ ಅಡುಗೆವಾಗಿದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ದಕ್ಷಿಣ ಭಾರತದ ಅನೇಕ ಮನೆಗಳಲ್ಲಿ ಇದನ್ನು ಬಾಣಂತಿಯರಿಗೆ ನೀಡುವ ಸಾಂಪ್ರದಾಯಿಕ ಆಹಾರವಾಗಿಯೂ ಬಳಸಲಾಗುತ್ತದೆ, ಏಕೆಂದರೆ ಇದು ದೇಹಕ್ಕೆ ಉಷ್ಣತೆ ಮತ್ತು ಶಕ್ತಿಯನ್ನು ನೀಡುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಅನ್ನ
ಬೆಳ್ಳುಳ್ಳಿ
ಎಣ್ಣೆ ಅಥವಾ ಬೆಣ್ಣೆ
ಜೀರಿಗೆ
ಒಣ ಮೆಣಸಿನಕಾಯಿ
ಕರಿಬೇವು
ಕಾಳುಮೆಣಸಿನ ಪುಡಿ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಬೆಳ್ಳುಳ್ಳಿಯನ್ನು ಹಾಕಿ. ಬೆಳ್ಳುಳ್ಳಿ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕು. ಬೆಳ್ಳುಳ್ಳಿಯ ಘಮ ಬರುವುದು ಮುಖ್ಯ. ನಂತರ ಉದುರು ಉದುರಾಗಿರುವ ಅನ್ನವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ, 2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ ಗಾರ್ಲಿಕ್ ರೈಸ್ ಸಿದ್ಧವಾಗುತ್ತದೆ.

Must Read