September 28, 2026
Monday, September 28, 2026
spot_img

ಬ್ಯಾಚುಲರ್ಸ್ ಸ್ಪೆಷಲ್: ಯಾವುದೇ ಸಾರು-ಪಲ್ಯ ಬೇಡ, ತಕ್ಷಣಕ್ಕೆ ಮಾಡಿ ಸೂಪರ್ ಈರುಳ್ಳಿ ರೈಸ್

ಈರುಳ್ಳಿ ರೈಸ್ ಬೆಳಗಿನ ಅವಸರದ ವೇಳೆ ಅಥವಾ ರಾತ್ರಿ ಉಳಿದ ಅನ್ನದಿಂದ ತಕ್ಷಣಕ್ಕೆ ಏನಾದರೂ ರುಚಿಯಾಗಿ ಮಾಡಬೇಕೆನಿಸಿದರೆ ಇದು ಅತ್ಯುತ್ತಮ ಆಯ್ಕೆ. ಕಡಿಮೆ ಸಾಮಗ್ರಿಗಳನ್ನು ಬಳಸಿ, ಯಾವುದೇ ಕರ್ರಿ ಅಥವಾ ಸಾರು ಇಲ್ಲದೆಯೂ ಸವಿಯಬಹುದಾದ ಅತ್ಯಂತ ಸರಳ ಬ್ಯಾಚುಲರ್ ರೆಸಿಪಿ ಇದು. ಈರುಳ್ಳಿಯ ಸಿಹಿ ಮತ್ತು ಮಸಾಲೆಗಳ ಕಾಂಬಿನೇಷನ್ ಹೊಂದಿರುವ ಈ ರೈಸ್ ಬಾಕ್ಸ್ ಗೂ ಇದು ಸೂಕ್ತವಾಗಿದೆ.

ಬೇಕಾಗುವ ಸಾಮಗ್ರಿಗಳು
ಅನ್ನ
ಈರುಳ್ಳಿ
ಎಣ್ಣೆ
ಸಾಸಿವೆ
ಉದ್ದಿನಬೇಳೆ:
ಕಡಲೆಬೇಳೆ
ಕಡಲೆಕಾಯಿ ಬೀಜ
ಹಸಿ ಮೆಣಸಿನಕಾಯಿ
ಕರಿಬೇವು
ಅರಿಶಿನ ಪುಡಿ
ಗರಂ ಮಸಾಲಾ ಪುಡಿ
ಕೊತ್ತಂಬರಿ ಸೊಪ್ಪು
ಉಪ್ಪು
ನಿಂಬೆಹಣ್ಣಿನ ರಸ

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ ಬೀಜ ಹಾಕಿ ಕೆಂಪಾಗುವರೆಗೆ ಹುರಿಯಬೇಕು. ನಂತರ ಹಸಿ ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಅರ್ಧ ನಿಮಿಷ ಬಾಡಿಸಿಕೊಳ್ಳಿ. ಈಗ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಅದು ಮೃದುವಾಗಿ, ತಿಳಿ ಚಿನ್ನದ ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿದ ನಂತರ ಒಗ್ಗರಣೆಗೆ ಉದುರಾದ ಅನ್ನ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಮಧ್ಯಮ ಉರಿಯಲ್ಲಿ 2 ನಿಮಿಷ ಚೆನ್ನಾಗಿ ಕೈಯಾಡಿಸಿದ ಬಳಿಕ ನಿಂಬೆಹಣ್ಣಿನ ರಸ ಹಿಂಡಿ ಮಿಕ್ಸ್‌ ಮಾಡಿದರೆ ಬಿಸಿಬಿಸಿಯಾದ ರುಚಿಕರ ಈರುಳ್ಳಿ ರೈಸ್ ಸವಿಯಲು ಸಿದ್ಧವಾಗುತ್ತದೆ.

Must Read