ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ವಿಶ್ವಕಪ್ನ ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಮಹಿಳಾ ತಂಡ 7 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 191 ರನ್ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತವನ್ನು ಆಸೀಸ್ ತಂಡ 3 ವಿಕೆಟ್ ಕಳೆದುಕೊಂಡು ತಲುಪಿತು.
ಕಾಂಗರೂ ಪಡೆಗೆ ಆರಂಭಿಕ ಬ್ಯಾಟರ್ ಹೀಲಿ ಮತ್ತು ರೇಚಲ್ ಹೇನ್ಸ್ ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟ ನೀಡಿದರು.
ಹೇನ್ಸ್ 34 ಎಸೆತಗಳಲ್ಲಿ 7 ಬೌಂಡರಿ ಸಹಿತ 34 ರನ್ಗಳಿಸಿ ನಶ್ರಾ ಸಂಧುಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕಿ ಲ್ಯಾನಿಂಗ್ 37 ಎಸೆತಗಳಲ್ಲಿ 6 ಬೌಂಡರಿಸಹಿತ 35 ರನ್ಗಳಿಸಿದರು. ವಿಕೆಟ್ ಕೀಪರ್ ಹೀಲಿ 79 ಎಸೆತಗಳಲ್ಲಿ 72 ರನ್ಗಳಿಸಿ ಔಟಾದರು. ಅನುಭವಿ ಪೆರ್ರಿ ಅಜೇಯ 26, ಬೆತ್ ಮೂನಿ ಅಜೇಯ 23 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.