ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ಕ್ಕಾಗಿ ಎಲ್ಲಾ ತಂಡಗಳು, ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಆರ್ ಸಿಬಿ ಮಾತ್ರ ಇನ್ನು ತನ್ನ ಕ್ಯಾಪ್ಟನ್ ಅನ್ನು ಘೋಷಣೆ ಮಾಡಿಲ್ಲ.
ಕ್ಯಾಪ್ಟನ್ ಯಾರಾಗುತ್ತಾರೆ ಅನ್ನುವ ಕುತೂಹಲದ ನಡುವೆ ಇಂದು ಆರ್ ಸಿಬಿ ಸರ್ಪ್ರೈಸ್ ನೀಡುವುದಾಗಿ ಘೋಷಿಸಿದೆ.
ಮಾರ್ಚ್ 12ರಂದು ಅಭಿಮಾನಿಗಳಿಗೆ ದೊಡ್ಡ ಸರ್ ಪ್ರೈಸ್ ನೀಡುವುದಾಗಿ ತಿಳಿಸಿದೆ. ಈಗಾಗಲೇ ತಂಡದ ಮೆಂಟರ್ ಆಗಿ ಎಬಿಡಿ ಅವರನ್ನು ಆಯ್ಕೆ ಮಾಡಿಲಾಗಿದ್ದು, ಇನ್ನು ಕ್ಯಾಪ್ಟನ್ ಆಯ್ಕೆ ಮಾತ್ರ ಬಾಕಿ ಇದ್ದು, ಮಾ.12ರಂದು ತಂಡದ ನಾಯಕನ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ಆರ್‌ಸಿಬಿ ನಾಯಕರುಗಳ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿದೆ.
2022ರ ಐಪಿಎಲ್ ಅಧ್ಯಾಯವನ್ನು ಮಾ.27ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದ್ದು, ಅಂದು ಐಪಿಎಲ್ 2022 ಆರಂಭಗೊಳ್ಳಲಿದೆ.