HEALTH | ಈ ಐದು ಕಾರಣಗಳಿಂದಾಗಿ ಪ್ರತಿದಿನ ಬೇಯಿಸಿದ ಮೊಟ್ಟೆಯನ್ನು ಸೇವಿಸಿ..

ಸಾಮಾನ್ಯವಾಗಿ ನಾನ್‌ ವೆಜ್‌ ಸೇವಿಸುವ ಪ್ರತಿಯೊಬ್ಬರೂ ದಿನವೂ ಮೊಟ್ಟೆ ಸೇವಿಸೋದಕ್ಕೆ ಇಷ್ಟಪಡುತ್ತಾರೆ. ಇದರಿಂದ ಸಿಗುವ ಪ್ರೋಟೀನ್‌ಗಾಗಿ ಜಿಮ್‌ಗೆ ಹೋಗುವವರು ನಾಲ್ಕೈದಕ್ಕೂ ಹೆಚ್ಚು ಮೊಟ್ಟೆಯನ್ನೂ ತಿನ್ನುತ್ತಾರೆ. ಅದರಲ್ಲಿಯೂ ಬೆಳಗ್ಗೆಯೇ ಯಾಕೆ ಮೊಟ್ಟೆ ತಿನ್ಬೇಕು? ಇಲ್ಲಿದೆ ನೋಡಿ ಡೀಟೇಲ್ಸ್…

1 ನಿಮ್ಮ ಮೆಟಬಾಲಿಸಮ್‌ನ್ನು ಹೆಚ್ಚು ಮಾಡುತ್ತದೆ. ಇದರ ಸೇವನೆಯಿಂದಾಗಿ ದೇಹ ಹೆಚ್ಚು ಕೊಲೆಸ್ಟ್ರಾಲ್‌ನ್ನು ಹೀರಿಕೊಳ್ಳೋದಿಲ್ಲ.

2 ಕಡಿಮೆ ಕ್ಯಾಲೋರಿ ಇದೆ. ನೀವು ತೂಕ ಇಳಿಕೆ ಮಾಡಿಕೊಳ್ಳೋ ಜರ್ನಿಯಲ್ಲಿದ್ದರೆ ಮೊಟ್ಟೆಗಿಂತ ಬೆಸ್ಟ್‌ ಫುಡ್‌ ಇನ್ನಿಲ್ಲ. ಒಂದು ಮೀಡಿಯಂ ಸೈಝ್‌ನ ಮೊಟ್ಟೆಯಲ್ಲಿ ಬರೀ ೬೩ ಕ್ಯಾಲೋರಿಗಳಿರುತ್ತದೆ. ಎರಡು ಕಪ್‌ ಟೀ ಕುಡಿದ ಲೆಕ್ಕ ಇದು.

3 ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇಮ್ಯುನಿಟಿ ಹೆಚ್ಚು ಮಾಡಿಕೊಳ್ಳೋಕೆ ಅಲ್ಲಿ ಇಲ್ಲಿ ಯಾಕೆ ಹೋಗಬೇಕು? ಇದರಲ್ಲಿ ಝಿಂಕ್‌, ಸೆಲೆನಿಯಮ್‌ ಇದೆ. ಇದೆರಡು ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

4 ಮೊಟ್ಟೆ ತಿಂದು ನೋಡಿ ದೀರ್ಘಕಾಲದವರೆಗೂ ಹಸಿವಾಗೋದಿಲ್ಲ. ಹಸಿವೇ ಆಗದಿದ್ದರೆ ಏನೇನೋ ತಿನ್ನೋದಿಲ್ಲ ಅಲ್ವಾ?

5 ಒಳ್ಳೆಯ ಕೊಲೆಸ್ಟ್ರಾಲ್‌ ಇದೆ ಜೊತೆಗೆ ಒಮೆಗಾ ಫ್ಯಾಟಿ ಆಸಿಡ್ಸ್‌ ಇದೆ, ಇನ್ನು ಕಣ್ಣಿನ ಹಾಗೂ ಮೆದುಳಿನ ಆರೋಗ್ಯಕ್ಕೂ ಇದು ಉತ್ತಮ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!