ಪ್ರತಿ ದಿನ ಮೀನು ತಿಂದು ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಸುಂದರವಾಗಿಸಿಕೊಳ್ಳಿ: ಸಚಿವರ ಹೇಳಿಕೆಗೆ ನೆಟ್ಟಿಗರು ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ನಟಿ ಐಶ್ವರ್ಯಾ ರೈ (Aishwarya Rai Bachchan) ಮೀನು ತಿನ್ನುತ್ತಿದ್ದರು. ಆದ್ದರಿಂದ ಅವರ ಕಣ್ಣುಗಳು ಮತ್ತು ಚರ್ಮವು ಸುಂದರವಾಗಿದೆ. ಮೀನು (Fish) ತಿನ್ನುವ ಮೂಲಕ ನಿಮ್ಮ ಕಣ್ಣುಗಳನ್ನು ಸುಂದರವಾಗಿಸಿಕೊಳ್ಳಿ ಎಂದು ಮಹಾರಾಷ್ಟ್ರದ ರಾಜ್ಯ ಬುಡಕಟ್ಟು ಸಚಿವ ವಿಜಯಕುಮಾರ್ ಗವಿತ್ ಹೇಳಿದ್ದಾರೆ.

ಧುಲೆ ಜಿಲ್ಲೆಯ ಅಂತುರ್ಲಿಯಲ್ಲಿ ಬುಡಕಟ್ಟು ಮೀನುಗಾರಿಗೆ ಮೀನುಗಾರಿಕೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ ಈ ಹೇಳಿಕೆ ನೀಡಿದ್ದಾರೆ. ಆ ಸಮಯದಲ್ಲಿ, ಡಾ. ಸುಪ್ರಿಯಾ ಗವಿತ್ ಕೂಡ ಉಪಸ್ಥಿತರಿದ್ದರು.

‘ನಾನು ನಿಮಗೆ ಐಶ್ವರ್ಯ ರೈ ಅವರ ಬಗ್ಗೆ ಹೇಳಲಾ? ನೀವು ಎಂದಾದರೂ ಆಕೆಯ ಕಣ್ಣುಗಳನ್ನು ನೋಡಿದ್ದೀರಾ? ಅವರು ಮಂಗಳೂರಿನ ಕಡಲ ತೀರದಲ್ಲಿ ವಾಸವಿದ್ದು, ಪ್ರತಿದಿನ ಮೀನು ಸೇವಿಸುತ್ತಿದ್ದರು. ದಿನಾ ಮೀನು ಸೇವಿಸಿದರೆ ನೀವು ಅವರಂತೆ ಕಣ್ಣುಗಳನ್ನು ಹೊಂದಬಹುದು. ಮೀನಿನಲ್ಲಿ ವಿಶೇಷವಾದ ಎಣ್ಣೆಯಂಶವಿದ್ದು, ಅದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ’ ಎಂದು ತಿಳಿಸಿದ್ದಾರೆ.

ಗವಿತ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಐಶ್ವರ್ಯ ರೈ ಕಣ್ಣುಗಳನ್ನು ಬಿಟ್ಟು ರಾಜ್ಯದ ಜಲ್ವಂತ ಸಮಸ್ಯೆ ಕಡೆ ಗಮನ ಹರಿಸುವಂತೆ ನೆಟ್ಟಿಗರು ಕುಟುಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!