ಟಾಂಗಾದಲ್ಲಿ ಜ್ವಾಲಾಮುಖಿ ಸ್ಫೋಟ: ತೈಲ ಟ್ಯಾಂಕರ್‌ ಸೋರಿಕೆ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ವಾರ ಟಾಂಗಾದಲ್ಲಿ ಸಂಭವಿಸಿದ ಜ್ವಾಲಮುಖಿ ಸ್ಫೋಟದಿಂದ ಪೆರು ಸಂಸ್ಕರಣಾಗಾರದಲ್ಲಿ ಹೆಚ್ಚು ತೈಲ ಸೋರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಸ್ಫೋಟದಿಂದ ಟಾಂಗಾದ ಸಮುದ್ರದಲ್ಲಿ ಅಲೆಗಳ ಪ್ರಭಾವ ಹೆಚ್ಚಾಗಿದ್ದು, ತೈಲ ಸೋರಿಕೆಯು ದ್ವೀಪಗಳು ಮತ್ತು ಮೀನುಗಾರಿಕೆ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದೆ.

Imageಈ ಬಗ್ಗೆ ಮಾಹಿತಿ ನೀಡಿದ ಪೆರು ವಿದೇಶಾಂಗ ಸಚಿವಾಲಯ, ಮೀನುಗಾರಿಕೆ ಪ್ರದೇಶದಲ್ಲಿ ಸುಮಾರು 18 ಸಾವಿರ ಚದರ ಕಿ.ಮಿ. ಪ್ರದೇಶದಲ್ಲಿನ ಪ್ರಾಣಿ ಮತ್ತು ಸಸ್ಯ ಜೀವಿಗಳಿಗೆ ತೈಲ ಸೋರಿಕೆಯಿಂದ ಪ್ರಾಣ ಹಾನಿಯಾಗಿದೆ.
ಸ್ಫೋಟದಿಂದ ಸ್ಪ್ಯಾನಿಷ್‌ ತೈಲ ಕಂಪನಿಯಾದ ರೆಪ್ಸೋಲ್‌ ನ ತೈಲ ಸಂಸ್ಕರಣಾ ಟ್ಯಾಂಕರ್‌ ನಲ್ಲಿ ಸೋರಿಕೆಯಾಗಿದ್ದು, ಸುಮಾರು 6 ಸಾವಿರ ಬ್ಯಾರೆಲ್‌ ಗಳಷ್ಟು ತೈಲ ಸೋರಿಕೆಯಾಗಿದೆ. ಇದರಿಂದ ಲಕ್ಷಾಂತರ ಜಲ ಪ್ರಾಣಿಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!