ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆಯನ್ನು ಹೆಚ್ಚಿಸಿದ್ದಾರೆ, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ. ಸರ್ಕಾರ ದರಗಳನ್ನು ನಿಗದಿಮಾಡಿದರೂ, ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮ ವ್ಯಾಪಾರಿಗಳು ತಮ್ಮಿಷ್ಟದ ದರಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಲಾಹೋರ್‌ನ ಮಾರುಕಟ್ಟೆಗಳಲ್ಲಿ, ಪಂಜಾಬ್ ಪ್ರಾಂತೀಯ ರಾಜಧಾನಿಯಲ್ಲಿ, ಮೊಟ್ಟೆಯ ಬೆಲೆ ಪ್ರತಿ ಡಜನ್‌ಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ. ಒಂದು ಮೊಟ್ಟೆಯ ಬೆಲೆ 33 ರೂಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೇ, ಸರ್ಕಾರ ಜನರ ಮೇಲಿನ ಆರ್ಥಿಕ ದರವನ್ನು ಇಳಿಸಲು ಕೆಲವು ವಸ್ತುಗಳ ದರಗಳನ್ನು ನಿಗದಿಪಡಿಸಿದೆ. ಉದಾಹರಣೆಗೆ, ಒಂದು ಕೆಜಿ ಈರುಳ್ಳಿಗೆ ಸರ್ಕಾರ 175 ರೂ ನಿಗದಿಪಡಿಸಿದ್ದರೆ, ವ್ಯಾಪಾರಿಗಳು 200 ರಿಂದ 250 ರೂ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಒಂದು ಡಜನ್ ಮೊಟ್ಟೆಯ ಬೆಲೆ 400 ರೂ ತಲುಪಿದ್ದರೆ, ಒಂದು ಕೆಜಿ ಚಿಕನ್ ಬೆಲೆ 615 ರೂಗಳಿಗೆ ಏರಿಕೆಯಾಗಿದೆ. ಇದರಿಂದ, ಸಾಮಾನ್ಯ ಜನರು ಕುಟುಂಬ ನಿರ್ವಹಣೆಗೂ ಕಷ್ಟಪಡುವಂತ ಸ್ಥಿತಿ ಬಂದೊದಗಿದೆ.