2024-25ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಮಾರ್ಚನಲ್ಲಿ ಲೋಕಸಭಾ ಚುನಾವಣೆ ಬರುವ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲೇ ಬಜೆಟ್ ಮಂಡಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾನಗಲ್ ಗ್ಯಾಂಗ್ ರೇಪ್ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಅವರಿಂದ ಮನವಿ ಸ್ವೀಕರಿಸಿದ ಸಿಎಂ. ಆ ಕುಟುಂಬಕ್ಕೆ ದೈರ್ಯ ತುಂಬಿ ಹಾಗೂ ಸಾಂತ್ವಾನ ಹೇಳಿದರು.

ಘಟನೆ ಕುರಿತು ತನಿಖೆ ಮಾಡುವುದಾಗಿ ಭರವಸೆ ನೀಡಿದ್ದೇನೆ. ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ. ನೈತಿಕ ಪೋಲೀಸ್ ಗಿರಿ ಮೂಲಕ ಯಾರನ್ನು ಕಾನೂನು ಕೈಗೆ ತೆಗೆದುಕೊಳ್ಳೋಕೆ ಬಿಡುವುದಿಲ್ಲ. ಕಾನೂನಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಈ ಕೇಸ್ ನಲ್ಲಿ ಯಾರನ್ನು ಬಿಡುವುದಿಲ್ಲ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಸಂತ್ರಸ್ಥೆ ಯ ಸಹೋದರಿಯಿಂದ ಈಗ ತಾನೇ ಅರ್ಜಿ ತೆಗೆದುಕೊಂಡಿದೆನಿ ಪರಿಶೀಲನೆ ಮಾಡ್ತೇವಿ, ಎಸ್ ಐ ಟಿ ಯಲ್ಲೂ ಪೋಲಿಸರೆ ಇರ್ತಾರೆ ಅಲ್ವಾ ಹೀಗಾಗಿ ಅಗತ್ಯ ಇಲ್ಲಾ. ಬೊಮ್ಮಾಯಿ ಹೇಳ್ತಾರೆ ಅಂತಾ ಮಾಡಲ್ಲ. ಯಾರು ತಪ್ಪು ಮಾಡಿದಾರೊ ಕ್ರಮ ಕೈಗೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನಿನ ರೀತಿಯಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಸಂತ್ರಸ್ಥೆಗೆ ಸಾಂತ್ವಾನ ಹೇಳಿದಾರೆ ಎಂದರು.

ಅನಂತಕುಮಾರ್ ಏಕವಚನದಲ್ಲಿ ಹೇಳಿಕೆಯ ವಿಚಾರ, ರಾಜಕೀಯವಾಗಿ ಆರೋಪ ಮಾಡ್ತಾರೆ. ಇಲ್ಲಿತನಕ ನಾಪತ್ತೆಯಾಗಿ ಚುನಾವಣೆ ಬಂದಾಗ ಬಂದಿದಾರೆ. ಅವರು ಏನಾದರೂ ಕೆಲಸ ಮಾಡಿದಾರಾ? ಬಡವರ ಕೆಲಸ ಮಾಡಿದಾರಾ? ಇವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಎಂದರೆ ಏನು ಗೊತ್ತಾ? ಎಂದು ತಿರಗೇಟು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!