Monday, October 2, 2023

Latest Posts

ಏಷ್ಯಾ ದೇಶಗಳಲ್ಲಿ ಕಾಡಲಿದೆ ಆರ್ಥಿಕ ಹಿಂಜರಿತ: ಎಚ್ಚರಿಸಿದೆ ಬ್ಲೂಮ್‌ಬರ್ಗ್ ಸಮೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಯುರೋಪ್ ಈಗಾಗಲೇ ಭಾರೀ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದು, ಏಷ್ಯಾ ದೇಶಗಳಲ್ಲಿ ಕೂಡ ಮುಂಬರುವ ದಿನಗಳಲ್ಲಿ ಆರ್ಥಿಕ ಹಿಂಜರಿತ ಹೆಚ್ಚುವ ಅಪಾಯ ಕುರಿತಂತೆ ಬ್ಲೂಮ್‌ಬರ್ಗ್ ಸಮೀಕ್ಷೆ ಎಚ್ಚರಿಸಿದೆ.

ಇದೇ ವೇಳೆ ಏಷ್ಯಾದ ದೇಶಗಳು ಈಗಲೂ ಅಮೆರಿಕ, ಯುರೋಪ್‌ಗಿಂತ ಹೆಚ್ಚು ಸ್ಥಿತಿಸ್ಥಾಪಕತ್ವ ಸ್ಥಿತಿ ಹೊಂದಿವೆ. ಭಾರತ ಈ ಆರ್ಥಿಕ ಹಿಂಜರಿತದಿಂದ ಪಾರಾಗಲಿದೆ ಎಂಬುದಾಗಿ ಸಮೀಕ್ಷೆಯ ಅಂಕಿ-ಅಂಶಗಳಿಂದ ವ್ಯಕ್ತವಾಗಿದೆ. ಅಮೆರಿಕ ಶೇ.40ರ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಲಿದ್ದು ಯುರೋಪ್ ಸ್ಥಿತಿ ಇದಕ್ಕಿಂತಲೂ ಗಂಭೀರವಾಗಿದ್ದು, ಇದು ಶೇ.50-55ಕ್ಕೆ ತಲುಪಬಹುದೆಂದು ಸಮೀಕ್ಷೆ ಹೇಳಿದೆ.

ಮುಂದಿನ ಒಂದು ವರ್ಷದೊಳಗೆ ಅಮೆರಿಕ ಶೇ.38 ಆರ್ಥಿಕ (ಈ ಹಿಂದೆ ಶೇ.33ಎಂದು ಅಂದಾಜಿಸಲಾಗಿತ್ತು) ಹಿಂಜರಿತಕ್ಕೆ ಸಿಲುಕಲಿದೆ ಎಂದು ಅದು ಹೇಳಿದೆ. ಬ್ಲೂಮ್‌ಬರ್ಗ್ ಸಮೀಕ್ಷೆಯಂತೆ, ಆರ್ಥಿಕ ಹಿಂಜರಿಕೆಯ ಸಂಭಾವ್ಯತೆಯಲ್ಲಿ ಶ್ರೀಲಂಕಾ ಸ್ಥಿತಿ ಅತ್ಯಂತ ತೀವ್ರವಾಗಿರಲಿದೆ ಎಂದು ಊಹಿಸಲಾಗಿದೆ. ಅದರ ಆರ್ಥಿಕ ಹಿಂಜರಿತದ ಪ್ರಮಾಣ ಶೇ.85ರವರೆಗೆ ತಲುಪಲಿದೆ ಎಂದು ಅದು ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!