ಇನ್ಮುಂದೆ ಸಾಮಾನ್ಯ ಕಾರುಗಳಲ್ಲಿಯೂ ಆರು ಏರ್‌ ಬ್ಯಾಗ್:‌ ನಿತಿನ್‌ ಗಡ್ಕರಿ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಇನ್ನು ಮುಂದೆ ಸಾಮಾನ್ಯ ಕಾರುಗಳಲ್ಲಿಯೂ ಆರು ಏರ್‌ ಬ್ಯಾಗ್‌ ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಆಟೋಮೊಬೈಲ್ ಉದ್ಯಮದಲ್ಲಿ ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ

“ರಸ್ತೆ ಸುರಕ್ಷತೆಯು ಒಂದು ದೊಡ್ಡ ಕಾಳಜಿಯಾಗಿದೆ. ಸಾಮಾನ್ಯ ಮಾದರಿ ಕಾರುಗಳಲ್ಲಿ ನಾವು 6 ಏರ್‌ಬ್ಯಾಗ್‌ಗಳನ್ನು ಅಲವಡಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಭಾರತದಲ್ಲಿ ಎರಡು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು ಜನಸಂಖ್ಯೆಯ ಬೆಳವಣಿಗೆ ಮತ್ತು ಇನ್ನೊಂದು ಆಟೋಮೊಬೈಲ್ ಬೆಳವಣಿಗೆ” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಾಹನಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಪ್ರಕ್ರಿಯೆ ಈಗಾಗಲೇ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವರು ಈ ಹಿಂದೆಯೂ ಹೇಳಿದ್ದರು.

ರಸ್ತೆ ಅಪಘಾತಗಳ ಕುರಿತು ಮಾತನಾಡಿದ ಗಡ್ಕರಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವಾಗಿದ್ದರೂ ಇನ್ನೂ ಸಾಕಷ್ಟು ಕೆಲಸಗಳಿವೆ. ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳಿಂದ 1,50,000 ಸಾವುಗಳು ಸಂಭವಿಸುತ್ತಿವೆ. ಇದರಲ್ಲಿ ಶೇಕಡಾ 65 ರಷ್ಟು ಸಾವುಗಳು 18-34 ವಯೋಮಾನದವರಾಗಿದ್ದಾರೆ ಎಂದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!