ಜಾರ್ಖಂಡ್, ಪ. ಬಂಗಾಳದಲ್ಲಿ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಇಡಿ ಅಧಿಕಾರಿಗಳು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹತ್ತಕ್ಕೂ ಹೆಚ್ಚು ಸ್ಥಳಗಳಿಗೆ ದಾಳಿ ನಡೆಸಿ ಶೋಧಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು ಪ್ರಸ್ತುತ ರಕ್ಷಣಾ ಹಾಗೂ ಸೇನೆಯ ಜಮೀನುಗಳ ಮೇಲೆ ಕಣ್ಣಿಟ್ಟಿದೆ. ಕೇಂದ್ರ ಕಾನೂನು ಜಾರಿ ಸಂಸ್ಥೆಯ ಪ್ರಕಾರ, ಈ ಭೂಮಿಯನ್ನು ಅಕ್ರಮವಾಗಿ ದುರ್ಬಳಕೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಒಡೆತನದ ರಕ್ಷಣಾ ಭೂಮಿಗಳು ದುರ್ಬಳಕೆಯಾಗಿರುವ ಕುರಿತು ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಏತನ್ಮಧ್ಯೆ, ಆದಾಯ ತೆರಿಗೆ ಅಧಿಕಾರಿಗಳು ರಾಜಸ್ಥಾನದ ಬಿಕಾನೇರ್ ಮತ್ತು ನೋಖಾದಲ್ಲಿ 40 ಸ್ಥಳಗಳಲ್ಲಿ ದಾಳಿ ನಡೆಸಿದರು. ಮೂವರು ದೊಡ್ಡ ಉದ್ಯಮಿಗಳ ಮನೆಗಳ ಜಾಗವನ್ನು ಇಲಾಖೆಯಿಂದ ಶೋಧಿಸಲಾಗಿದೆ. ಬಿಕಾನೇರ್‌ನಲ್ಲಿ ತಯಾಲ್ ಗ್ರೂಪ್ ಮತ್ತು ರಾಠಿ ಗುಂಪಿನ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ನೋಖಾದಲ್ಲಿ ಐಟಿ ತಂಡವು ಝವರ್ ಗ್ರೂಪ್ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಅಲ್ಲದೆ, ಎಸ್‌ಆರ್‌ಎಸ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಅನಿಲ್ ಜಿಂದಾಲ್ ಮತ್ತು ನಿರ್ದೇಶಕರಾದ ಜಿತೇಂದರ್ ಕುಮಾರ್ ಗಾರ್ಗ್, ಪ್ರವೀಣ್ ಕುಮಾರ್ ಕಪೂರ್ ಮತ್ತು ವಿನೋದ್ ಜಿಂದಾಲ್ ಸೇರಿದಂತೆ 19 ಆರೋಪಿಗಳು ಮತ್ತು ಘಟಕಗಳ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ. ವಿವಿಧ ಮನೆ ಖರೀದಿದಾರರು ಮತ್ತು ಹೂಡಿಕೆದಾರರ ವಿರುದ್ಧ ಮಾಡಿದ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!