ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಕೇಸ್‌ನಲ್ಲಿ ಅಕ್ರಮ ಆಗಿರುವುದು ನಿಜ ಎಂದು ಲೋಕಾಯುಕ್ತಕ್ಕೆ ಇಡಿ ಬರೆದಿರುವ ಪತ್ರ ದುರುದ್ದೇಶಪೂರಿತ ಎಂದು ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡಿ ಯಾರು? ದೇಶದಲ್ಲಿ ಎಲ್ಲಾ ಕಡೆ ಹೀಗೆ ಇಡಿ ತನಿಖೆ ಮಾಡ್ತಿದೆಯಾ? ಇಡಿ ವರ್ತನೆ ದುರುದ್ದೇಶದಿಂದ ಕೂಡಿದೆ. ಇಡಿ ಅವರು ಮುಡಾ ಕೇಸ್‌ನಲ್ಲಿ ಬಂದಿರುವುದೇ ದುರುದ್ದೇಶ ಎಂದು ಕಿರಿಕಾರಿದ್ದಾರೆ.
ಬಿಜೆಪಿಯವರಿಗೆ ಮುಡಾದಲ್ಲಿ ಹಿಂದೆ ಏನಾಗಿತ್ತು ಎಂದು ಗೊತ್ತಿರಲಿಲ್ಲವಾ? ಬಿಜೆಪಿ, ಜೆಡಿಎಸ್ ಶಾಸಕರು ಇದರಲ್ಲಿ ಭಾಗಿಯಾಗಿರಲಿಲ್ವಾ? ಇಡಿ ಅವರಿಗೆ ಲೋಕಾಯುಕ್ತದವರು ವರದಿ ಕೊಡಿ ಎಂದು ಕೇಳಿದ್ದರಾ? ಲೋಕಾಯುಕ್ತದವರು ಅವರ ತನಿಖೆ ನಿಷ್ಪಕ್ಷಪಾತವಾಗಿ ಮಾಡಿ, ವರದಿ ಕೊಡಬೇಕು. ನಮ್ಮ ಸರ್ಕಾರದ ಮೇಲೆ ಪ್ರತ್ಯೇಕವಾಗಿ ಇಡಿಯವರು ತನಿಖೆ ಮಾಡಿ ಗೂಬೆ ಕೂರಿಸಲು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್ ಅವರೆಲ್ಲ ಸೇರಿ ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.