ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಹುದ್ದೆ ವಿಚಾರದಲ್ಲಿ ಯಾವುದೇ ಒಪ್ಪಂದವಿಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ ಪಕ್ಷಕ್ಕೆ ವಿಧೇಯತೆ ತೋರಿದ್ದೇನೆ. ಸಿಎಂ ಹೇಳಿದ ಮೇಲೆ ಯಾವುದೇ ತಕರಾರೇ ಇಲ್ಲ, ಪ್ರಶ್ನೆಗಳಿಲ್ಲ, ವಾದಗಳಿಲ್ಲ, ನಾನು ಎಲ್ಲದಕ್ಕೂ ಉತ್ತರಿಸಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಲೋಕಾಯುಕ್ತಕ್ಕೆ ಜಾರಿ ನಿರ್ದೇಶನಾಲಯ ಪತ್ರ ಬರೆದ ವಿಚಾರಕ್ಕೆ ಸಂಬಧಿಸಿದಂತೆ ಕೇಳಿದ ಪ್ರಶ್ನೆಗೆ, ಯಾವುದೇ ವಿಚಾರಣೆ ಗುಪ್ತವಾಗಿ ನಡೆಯುವಂತದ್ದು. ಏನಾದ್ರೂ ಇದ್ದರೆ ಕೋರ್ಟ್‌ಗೆ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಸಲ್ಲಿಸದೇ ಮಾಧ್ಯಮಕ್ಕೆ ಬಿಡುಗಡೆ ಮಾಡುತ್ತೇವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಇದು ಮಾತ್ರ ಅವರು ಎಷ್ಟು ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಚಿಂತಿತರಾಗಿದ್ದಾರೆಂದು ತೋರಿಸುತ್ತದೆ. ಯಾವುದೂ ಸ್ಪಷ್ಟವಾಗಿಲ್ಲ. ಆದರೆ ಚಿಂತಿಸಬೇಡಿ, ನಮ್ಮ ಹೋರಾಟ ಮುಂದುವರಿಯುತ್ತದೆ. ನಾವು ನ್ಯಾಯಾಲಯವನ್ನು ನಂಬುತ್ತೇವೆ. ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರ ಒಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದರು.