Saturday, March 25, 2023

Latest Posts

ದೆಹಲಿ ಮದ್ಯ ಹಗರಣ: ಕವಿತಾ ಮನವಿಗೆ ಸ್ಪಂದಿಸಿದ ಇಡಿ, ವಿಚಾರಣೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್ಎಸ್ ಎಂಎಲ್ಸಿ ಕವಿತಾಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಇಡಿ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿದೆ. ನೋಟೀಸ್ ಪ್ರಕಾರ ಕವಿತಾ ಇಂದು (ಮಾರ್ಚ್ 9) ಇಡಿ ಮುಂದೆ ಹಾಜರಾಗಬೇಕಿತ್ತು. ಆದರೆ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ ಎಂದು ಕವಿತಾ ಎರಡು ದಿನಗಳ ಗಡುವು ಕೇಳಿ ಇಡಿಗೆ ಪತ್ರ ಬರೆದಿದ್ದರು.

ಮಾರ್ಚ್ 11 ರಂದು ವಿಚಾರಣೆಗೆ ಹಾಜರಾಗುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಪೂರ್ವ ಕಾರ್ಯಕ್ರಮಗಳ ಕಾರಣ ಮಾರ್ಚ್ 9 ರಂದು ಹಾಜರಾಗಲು ಸಾಧ್ಯವಿಲ್ಲ ಎಂದು ಕವಿತಾ ಹೇಳಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಿಸಲು ಅವಕಾಶವಿದ್ದರೂ ನೇರವಾಗಿ ಇಡಿ ಕಚೇರಿಗೆ ಬಂದು ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ತನಿಖೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆರೋಪಿಸಿದರು. ಪ್ರಸ್ತುತ ತನಿಖೆಗೂ ತಮಗೂ ಯಾವುದೇ ಸಂಬಂಧವಿಲ್ಲ ಇದೆಲ್ಲವೂ ರಾಜಕೀಯ ಪಕ್ಷದ ಭಾಗವಾಗಿ ನಡೆಯುತ್ತಿದೆ ಎಂಬ  ದೂರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!