ರೈಲು ದುರಂತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ, ಉಚಿತ ವಸತಿ: ಮಾಜಿ ಕ್ರಿಕೆಟಿಗ ಸೆಹ್ವಾಗ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಡಿಶಾ ರೈಲು ದುರಂತದಲ್ಲಿ ಅನೇಕರು ತಮ್ಮವರನ್ನು ಕಳೆದುಕೊಂಡಿದ್ದು, ಮುಗ್ದ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ.

ಹೀಗೆ ಅನಾಥರಾದ ಮಕ್ಕಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹಾಯಹಸ್ತ ಚಾಚಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ಕಲ್ಪಿಸುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ.

ಒಡಿಶಾ ರೈಲು ದುರಂತದ ಫೋಟೋ ಹಾಗೂ ಘಟನಾ ಸ್ಥಳದ ದೃಶ್ಯಗಳು ತೀವ್ರ ನೋವು ತರುತ್ತಿದೆ. ಅಪಘಾತವಾದ ದಿನದಿಂದ ಈ ಚಿತ್ರಗಳು ಕಾಡುತ್ತಿದೆ. ಈ ನೋವಿನ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವ್ಯವಸ್ಥೆ ಕಲ್ಪಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ದುರಂತ ನಡೆದ ಸಂದರ್ಭ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ, ಸಿಬ್ಬಂದಿ ವರ್ಗದವರಿಗೆ ನನ್ನ ಸಲ್ಯೂಟ್. ವೈದ್ಯಕೀಯ ತಂಡ, ಸ್ವಯಂ ಸೇವಕರ ಗುಂಪು, ರಕ್ತ ದಾನ ಮಾಡಿದ ಮಹನಿಯರಿಗೆ ನನ್ನ ನಮಗಳು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

https://twitter.com/virendersehwag/status/1665345980311404545?ref_src=twsrc%5Etfw%7Ctwcamp%5Etweetembed%7Ctwterm%5E1665345980311404545%7Ctwgr%5E2d2316352c53461d89529169b5b44285d50816ab%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fvirendersehwag%2Fstatus%2F1665345980311404545%3Fref_src%3Dtwsrc5Etfw

ಸೆಹ್ವಾಗ್ ಘೋಷಣೆಗೂ ಮೊದಲು ಉದ್ಯಮಿ ಗೌತಮ್ ಅದಾನಿ, ಅಪಘಾತದಿಂದ ಅನಾಥರಾಗಿರುವ ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಒಡಿಶಾ ರೈಲು ಅಪಘಾತದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ಶಾಲಾ ಶಿಕ್ಷಣ ಜವಾಬ್ದಾರಿಯನ್ನು ಅದಾನಿಗ್ರೂಪ್ ನೋಡಿಕೊಳ್ಳಲಿದ ಎಂದು ಘೋಷಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!