ನಿಗೂಢವಾಗಿ ಸಾವನ್ನಪ್ಪಿದ ಶಿಕ್ಷಣ ಸಚಿವರ ಸೊಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಸೊಸೆ ಸವಿತಾ ಪರ್ಮಾರ್ ನಿಗೂಢವಾಗಿ ಸಾವನ್ನಪ್ಪಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಮನೆಯಲ್ಲಿ ಪತ್ತೆಯಾಗಿದೆ.
ಕಲಪಿಪಾಲ್‌ ತೆಹಸಿಲ್‌ನ ಪೊಂಚನೇರ ಹಳ್ಳಿಯ ನಿವಾಸದಲ್ಲಿ ಸವಿತಾ ಪರ್ಮಾರ್ ಮೃತದೇಹ ಪತ್ತೆಯಾಗಿದೆ.ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ. 3 ವರ್ಷಗಳ ಹಿಂದೆ ಸವಿತಾ ಅವರ ವಿವಾಹ ಇಂದರ್ ಸಿಂಗ್ ಪರ್ಮಾರ್ ಪುತ್ರ ದೇವರಾಜ್ ಸಿಂಗ್‌ ಜೊತೆ ನಡೆದಿತ್ತು.
ಇದೀಗ ಆತ್ಮಹತ್ಯೆಗೆ ಕಾರಣ ಏನೂ ಎಂಬುದು ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪೊಲೀಸರ ತನಿಖೆಯ ಬಳಿಕ ಕಾರಣ ತಿಳಿಯಲಿದೆ.
ಸೊಸೆ ಸಾವನ್ನಪ್ಪಿದ ಸಮಯದಲ್ಲಿ ಸಚಿವ ಇಂದರ್ ಸಿಂಗ್‌ ಪರ್ಮಾರ್ ರಾಜಧಾನಿ ಭೋಪಾಲ್‌ನಲ್ಲಿದ್ದರು. ಸವಿತಾ ಪರ್ಮಾರ್ ಪತಿ ದೇವರಾಜ್ ಸಿಂಗ್ ಮೊಹಮ್ಮದ್ ಖೇರಾದಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಸವಿತಾ ಪರ್ಮಾರ್ ಮೃತದೇಹದ ಬಳಿ ಯಾವುದೇ ಡೆತ್‌ ನೋಟ್‌ ಕಂಡುಬಂದಿಲ್ಲ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಸಚಿವ ಇಂದರ್ ಸಿಂಗ್ ಪರ್ಮಾರ್ ಮತ್ತು ಸವಿತಾ ಪತಿ ದೇವರಾಜ್ ಸಿಂಗ್ ಮನೆಗೆ ವಾಪಸ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!