ನಾನು ಸುರಕ್ಷಿತವಾಗಿದ್ದೇನೆ: ನೂತನ ಸಂಸದೆ ಕಂಗನಾ ರಣಾವತ್‌

ಹೊಸದಿಗಂತ ಡಿಜಿಟಲ್ ಡೆಸ್ಕ್ : 

ನಾನು ಸುರಕ್ಷಿತವಾಗಿದ್ದೇನೆ ಎಂದು ನಟಿ, ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಕಂಗನಾ ರಣಾವತ್‌ ಹೇಳಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಸಂಬಂಧ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕಂಗನಾ, ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ ನಾನು ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದಿದ್ದಾರೆ.

ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್‌ ಮುಗಿಸಿ ಹೊರ ಬಂದ ತಕ್ಷಣ ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್‌ನ ಸೆಕ್ಯುರಿಟಿ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ಈ ವೇಳೆ ಯಾಕೆ ಹೀಗೆ ಮಾಡಿದೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ಸದ್ಯ ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿ ಇದೆ ಎಂದು ಕಂಗನಾ ತಿಳಿಸಿದ್ದಾರೆ.

https://x.com/ANI/status/1798700171213353182?ref_src=twsrc%5Etfw%7Ctwcamp%5Etweetembed%7Ctwterm%5E1798700171213353182%7Ctwgr%5E8d6244faddbf32f3cc8d27053efaac51386e595c%7Ctwcon%5Es1_&ref_url=https%3A%2F%2Fpublictv.in%2Fi-am-safe-i-am-perfectly-fine-says-kangana-ranaut%2F

ನಡೆದಿದ್ದೇನು? 
ಕಂಗನಾ ಚಂಡೀಗಢದಿಂದ ದೆಹಲಿಗೆ ಹೋಗಬೇಕಿದ್ದರಿಂದ ಮಧ್ಯಾಹ್ನ 3.30ರ ಸುಮಾರಿಗೆ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಕಂಗನಾ ಜೊತೆಗಿದ್ದ ಮಯಾಂಕ್ ಮಧುರ್ ಅವರು ಕುಲ್ವಿಂದರ್ ಕೌರ್ ಗೆ ಕಪಾಳಮೋಕ್ಷ ಮಾಡಲು ಯತ್ನಿಸಿದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಸದ್ಯ ಕಂಗನಾ ಅವರು ದೆಹಲಿಗೆ ಬಂದಿಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನಾಲಿಗೆ ಹರಿಬಿಟ್ಟರೆ ಜನರು ಸಕಾಲದಲ್ಲಿ ಉತ್ತರ ಕೊಡುವರು,, ಇಂಥಾ ಸಂಸದರನ್ನು ಸಾಕಿ ಸಲುಹುವ ಪಕ್ಷದ ಆಂತರಿಕ ಸಂಸ್ಕಾರ ತನ್ನ ಅವನತಿಗೆ ಸ್ವತಃ ಗುಂಡಿ ತೋಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ,,,ಸುರಕ್ಷಾ ಬಲದ ಯುವತಿಗೆ ಕಾನೂನು ಕಟ್ಟಳೆಗಳು ಕ್ರಮದ ಬಗ್ಗೆ ಮಾತನಾಡುವಾಗ ನಾವು ಜನಪ್ರತಿನಿಧಿ ಸಂವಿಧಾನಾತ್ಮಕ ಜವಾಬ್ದಾರಿಯ ಪ್ರಜ್ಞೆ ಇಲ್ಲದೆ ನಾಲಿಗೆ ಬಳಸಿದರೆ ಅವಳ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವ್ಯಾರೂ ಹೇಳುವುದಿಲ್ಲ ಯಾಕೆ,,, ಪತ್ರಿಕೆಗಳು ಮಾಧ್ಯಮಗಳು ನಿಮ್ಮ ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಲು ಸಾಧ್ಯವಿಲ್ಲ ವಾ,,,

LEAVE A REPLY

Please enter your comment!
Please enter your name here

error: Content is protected !!