ಮತ್ತೊಂದು ಹೊಸ ದಾಖಲೆ ಬರೆಯುವತ್ತ ಸಜ್ಜಾಗುತ್ತಿದೆ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪೋತ್ಸವದ 6ನೇ ಆವೃತ್ತಿಗೆ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆ ಸಜ್ಜಾಗುತ್ತಿದೆ.
ಅಕ್ಟೋಬರ್ 23ರಂದು ಅಯೋಧ್ಯೆಯಲ್ಲಿ ದೀಪೋತ್ಸವದ 6ನೇ ಆವೃತ್ತಿ ನಡೆಯಲಿದ್ದು, ಈ ವರ್ಷ ಘಾಟ್‌ಗಳಲ್ಲಿ ಸುಮಾರು 14.5 ಲಕ್ಷ ದೀಪಗಳು ಬೆಳಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಲಿದೆ.

ಪವಿತ್ರ ಸರಯೂ ನದಿ ತೀರದಲ್ಲಿನ ರಾಮ್ ಕಿ ಪೈದಿ ಘಾಟ್‌ನಲ್ಲಿ ಕಳೆದ ವರ್ಷ 7.5 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿ ದಾಖಲೆ ನಿರ್ಮಿಸಲಾಗಿತ್ತು. ಈ ವರ್ಷ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ದೀಪೋತ್ಸವದ ಗಾತ್ರ ವೃದ್ಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!