ಮತಾಂತರಗೊಂಡವರ ಮನಃ ಪರಿವರ್ತನೆಗೆ ಯತ್ನ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಲಿಂಗಾಯತ ಧರ್ಮದ ಕೆಲ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಪರಿಶೀಲನೆ ನಡೆಸಿ ಆದಷ್ಟು ಬೇಗ ಅವರನ್ನು ವಾಪಸ್‌ ಕರೆಯತರುವ ಪ್ರಯತ್ನ ಮಾಡುವುದಾಗಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರಗೊಂಡವರ ಮನ ಪರಿವರ್ತನೆಗೊಳಿಸಿ ಇಷ್ಟಲಿಂಗ ದೀಕ್ಷೆ ನೀಡಿ ಮರಳಿ ಲಿಂಗಾಯತ ಧರ್ಮಕ್ಕೆ ತರಲಾಗುವುದು ಎಂದರು.

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಸುಮಾರು 120 ಲಿಂಗಾಯತ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲು ಸಮಾಜದ ಪ್ರಮುಖರಿಗೆ ತಿಳಿಸಿದ್ದೇನೆ. ಆ ಕುಟುಂಬಗಳನ್ನು ಶೀಘ್ರದಲ್ಲಿ ಗುರುತಿಸಿ ಅವರನ್ನು ಲಿಂಗಾಯತ ಧರ್ಮಕ್ಕೆ ಪುಬಃ ಕರೆತರುವ ಕುರಿತು ಮನ ಪರಿವರ್ತನೆ ಮಾಡಲಾಗುವುದು. ಅವರಿಗೆ ಲಿಂಗ ದೀಕ್ಷೆ ನೀಡಿ ವಾಪಸ್ಸು ಕರೆತರಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!