ರೆಸಿಪಿ: ಮೊಟ್ಟೆ ಸಾರು
ಸಮಯ: ಅರ್ಧ ಗಂಟೆ
ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಟೊಮ್ಯಾಟೊ
ಕಾಯಿ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಚಕ್ಕೆ
ಲವಂಗ
ಖಾರದಪುಡಿ
ಸಾಂಬಾರ್ ಪುಡಿ
ಅರಿಶಿಣ
ಮಾಡುವ ವಿಧಾನ
ಮೊದಲು ಎಣ್ಣೆಗೆ ಈರುಳ್ಳಿ, ಬೆಳ್ಳುಳ್ಳಿ,ಟೊಮ್ಯಾಟೊ, ಶುಂಠಿ ಹಾಕಿ ಬಾಡಿಸಿ
ನಂತರ ಇದು ತಣ್ಣಗಾಗಲು ಬಿಡಿ
ನಂತರ ಮಿಕ್ಸಿಗೆ ಈ ಮಿಶ್ರಣ ಹಾಗೂ ಕಾಯಿ, ಚಕ್ಕೆ, ಲವಂಗ, ಖಾರದಪುಡಿ, ಸಾಂಬಾರ್ ಪುಡಿ, ಅರಿಶಿಣ, ಕಾಯಿ, ಕೊತ್ತಂಬರಿ ಹಾಕಿ.
ನಂತರ ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ.
ನಂತರ ಮಿಕ್ಸಿ ಮಾಡಿದ ಈ ಮಸಲಾ ಹಾಕಿ
ನೀರು ಹಾಕಿ.
ಇದು ಸ್ವಲ್ಪ ಕುದ್ದ ಮೇಲೆ ಉಪ್ಪು, ಮೊಟ್ಟೆ ಹಾಕಿ.
ಮೊಟ್ಟೆ ಹಾಕಿದ ಮೇಲೆ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಬಿಟ್ಟುಬಿಡಿ
ಕೈ ಆಡಿಸಿದರೆ ಮೊಟ್ಟೆ ಕಲಸುತ್ತದೆ
ನಂತರ 10 ನಿಮಿಷ ಕುದಿಸಿದರೆ ಮೊಟ್ಟೆ ಸಾರು ರೆಡಿ