ನಾಡಿನಾದ್ಯಂತ ಮುಸಲ್ಮಾನರ ಪವಿತ್ರ ಹಬ್ಬ ಈದುಲ್‌ ಫಿತ್ರ್‌ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಾಡಿನಾದ್ಯಂತ ಇಂದು ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತ್ರ್‌ನ್ನು ಆಚರಿಸಲಾಗುತ್ತಿದೆ.

ನಿನ್ನೆ ಕೇರಳದ ಪೂನ್ನಾಣಿಯಲ್ಲಿ ಚಂದ್ರನ ದರ್ಶನವಾದರಿಂದ ಇಂದು ಕೇರಳ ರಾಜ್ಯ ಸೇರಿ ಕರಾವಳಿ ಭಾಗ ಮಂಗಳೂರು, ಕೊಡಗಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮುಸಲ್ಮಾನರು 29 ದಿನ ಉಪವಾಸ ನೆರವೇರಿಸಿ ಇಂದು ಉಪವಾಸ ಮುರಿಯಲಾಗುತ್ತದೆ. ಸೌದಿಯಲ್ಲಿ ಈ ಬಾರಿ 30 ದಿನ ಉಪವಾಸ ಆಚರಿಸಲಾಗಿದೆ.

ಪವಿತ್ರವಾದ ರಂಜಾನ್ ಉಪವಾಸ 29 ದಿನ ಪೂರ್ಣಗೊಳಿಸಿ ಕರಾವಳಿಯಾದ್ಯಂತ ಮುಸಲ್ಮಾನರು ಇಂದು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಕೇರಳ,ತಮಿಳು ನಾಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮುಸಲ್ಮಾನರು ನೆರವೇರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!