ವ್ಹೀಲ್ ಚೇರ್ ಮೂಲಕ ಬಂದು ಮತಚಲಾಯಿಸಿದ್ದ ಹಿರಿಯೆ ದೇವಕಿ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುತ್ತೂರು ನಗರದ ಬೊಳುವಾರು ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ದೇವಕಿ ಸುಬ್ರಹ್ಮಣ್ಯ ಭಟ್(81) ಏ.26 ರಂದು ರಾತ್ರಿ ನಿಧನ ಹೊಂದಿದ್ದಾರೆ.

ಏ.26ರ ಬೆಳಗ್ಗೆ ಬೊಳುವಾರು ಶಾಲಾ ಮತಗಟ್ಟೆಗೆ (123) ಬಿಎಲ್‍ಓ ಯಶೋಧಾ ಅವರ ಸಹಾಯದಿಂದ ವೀಲ್‍ಚೇರ್ ಮೂಲಕ ಅವರು ಆಗಮಿಸಿ, ಮತ ಚಲಾಯಿಸಿದ್ದರು. ಅದೇ ದಿನ ರಾತ್ರಿ ಮನೆಯಲ್ಲೇ ವಯೋಸಹಜ ಕಾರಣದಿಂದ ನಿಧನ ಹೊಂದಿದ್ದಾರೆ.

ಮೃತರು ಪತಿ, 6 ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ರಾಮ್‍ದಾಸ್ ಹಾರಾಡಿ ಹಾಗೂ ಬೊಳುವಾರು ಬೂತ್ ಸಂಖ್ಯೆ 123ರ ಅಧ್ಯಕ್ಷ ದಯಾಕರ್ ಸಹಿತ ಪ್ರಮುಖರನೇಕರು ಮೃತರ ಅಂತಿಮ ದರ್ಶನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!