KNOW WHY| ಈ ವಸ್ತುಗಳನ್ನು ನೇರವಾಗಿ ಕೈಗೆ ಕೊಡಬಾರದು ಅನ್ನೋದು ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿರಿಯರ ಅನುಭವದ ಮಾತುಗಳಲ್ಲಿ ಕೆಲವೊಂದು ಅರ್ಥವಿರುತ್ತದೆ. ಯಾವುದೇ ಕೆಲಸ ಮಾಡಬೇಕಾದರೆ ಬದ್ಧತೆಯಿಂದ ಇರಬೇಕು. ಯಾವ ಸಮಯದಲ್ಲಿ ಯಾವ ಕೆಲಸವನ್ನು ಹೇಗೆ ಮಾಡಿದರೆ ಉತ್ತಮ ಎಂಬುದನ್ನು ಅವರ ತಿಳುವಳಿಕೆಯಿಂದ ಕಲಿಯಬೇಕಿದೆ. ಉದಾಹರಣೆಗೆ ಕೆಲವು ವಸ್ತುಗಳನ್ನು ಕೈಗೆ ನೀಡುವುದು..ಕೆಲವು ವಸ್ತುಗಳನ್ನು ಕೈಯಿಂದ ಸ್ಪರ್ಶಿಸುವುದು ಸಹ ಅಶಾಂತಿ ಮತ್ತು ಜಗಳಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ..

  • ಯಾರ ಕೈಗೂ ಉಪ್ಪನ್ನು ನೇರವಾಗಿ ಕೊಡಬೇಡಿ. ಇದರಿಂದ ಅವರ ನಡುವೆ ಜಗಳವಾಗುತ್ತದೆ ಎಂಬ ನಂಬಿಕೆಯಿದೆ. ಉಪ್ಪನ್ನು ತಟ್ಟೆ, ಎಲೆ ಅಥವಾ ಬಟ್ಟಲಿನಲ್ಲಿ ಹಾಕಿ ಕೊಡಬೇಕೆಂದು ಹೇಳುತ್ತಾರೆ.
  • ತಿನ್ನಲು ಆಹಾರ ಕೊಡುವಾಗ ಕೈಗೆ ಕೊಡುವುದಕ್ಕಿಂತ ತಟ್ಟೆಯಲ್ಲಿ ಹಾಕಿ ಕೊಡಬೇಕು. ಕೈಯಿಂದ ಕೊಟ್ಟರೆ ಸಂಪತ್ತು ಕಡಿಮೆಯಾಗುತ್ತಂತೆ. ಹಾಗೆಯೇ ನೀರನ್ನು ಕೂಡ ಅಂಗೈಗೆ ಹಾಕಬೇಡಿ, ಒಂದು ಲೋಟ ಬಾಟೆಲ್‌ನಲ್ಲಿ ಹಾಕಿಕೊಡುವುದು ಉತ್ತಮ. ಹಾಗೆ ಮಾಡದಿದ್ರೆ ಪುಣ್ಯಗಳು ನಷ್ಟವಾಗುತ್ತದೆ.
  • ಕರವಸ್ತ್ರವನ್ನು ಯಾರಿಗಾದರೂ ನೀಡಬೇಕಾದರೆ, ಕೈಗೆ ಕೊಡದೆ ಅವರ ಬಳಿಯಿಡಿ. ಕೈಗೆ ಕೊಡುವುದರಿಂದ ಸಂಪತ್ತು ನಷ್ಟವಾಗುತ್ತಂತೆ.
  • ಹಣವನ್ನು ಕೊಡುವಾಗ ಮತ್ತು ಪಡೆಯುವಾಗ ಎಡಗೈಯಿಂದ ಕೊಡಬಾರದು ಎಂದು ಹೇಳಲಾಗುತ್ತದೆ. ಹಣವನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ ಆದ್ದರಿಂದ ಎಡಗೈಯಿಂದ ಹಾಗೆ ಮಾಡಬಾರದು ಎಂದರ್ಥ.
  • ಹಿರಿಯರ ಆಶೀರ್ವಾದ ತೆಗೆದುಕೊಳ್ಳುವಾಗ ಮತ್ತು ದೇವರ ವಿಗ್ರಹಗಳನ್ನು ಸ್ಪರ್ಶಿಸುವಾಗ ಬಲಗೈಯನ್ನು ಬಳಸಬೇಕು

ಹಿರಿಯರು ಏನೇ ಹೇಳಿದರೂ ಅದರ ಹಿಂದೆ ಏನೋ ಒಳ್ಳೆತನ ಅಡಗಿರುತ್ತದೆ. ಇಂತಹ ನಿಯಮಗಳಿಂದ ಸ್ವಚ್ಛತೆ, ಆರೋಗ್ಯ ಮತ್ತು ಶಿಸ್ತಿನ ರೂಪವೂ ರೂಢಿಸಿಕೊಂಡಂತಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!