ಹೊಸದಿಗಂತ ವರದಿ, ಕಲಬುರಗಿ:
ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಕಲಬುರಗಿ ತಾಲೂಕಿನ ಅಫಜಲಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಫರಹತಾಬಾದ್ ಚೆಕ್ ಪೋಸ್ಟ್ ಬಳಿ 1 ಕೋಟಿ ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ.
ರವಿ ಮಾಡಬೂಳ ಎಂಬುವವರು ಯಾವುದೇ ರೀತಿಯ ಪುರಾವೆಗಳಿಲ್ಲದೇ,ಕಾರಿನೊಳಗೆ ಹಣ ಕೊಂಡ್ಯೋಯುತ್ತಿದ್ದರು.ಈ ವೇಳೆ ಕಾರು ತಪಾಸಣೆಗೆ ಇಳಿದ ಪೋಲಿಸರು,ತಪಾಸಣೆ ವೇಳೆ 1 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿವೆ.
ಇನ್ನೂ ಕಲಬುರಗಿ ಕಡೆಯಿಂದ ಮುಡಬೂಳ ಕಡೆಗೆ ಹೊರಟಿದ್ದ ಕಾರಿನಲ್ಲಿರುವ ಒಂದು ಕೋಟಿ ಹಣ ಹಾಗೂ ರವಿ ಮಾಡಬೂಳ ಅವರನ್ನು ವಶಕ್ಕೆ ಪಡೆದು ಚುನಾವಣಾಧಿಕಾರಿಗಳು ಹಣವನ್ನು ಎಲ್ಲಿಂದ ಮತ್ತು ಯಾವ ಕಾರಣಕ್ಕೆ ಸಾಗಾಟ ಮಾಡುತ್ತಿದ್ದಿರಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಫರಹತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.