Sunday, June 4, 2023

Latest Posts

ಚುನಾವಣಾ ಅಲರ್ಟ್: ದಾಖಲೆ ಇಲ್ಲದ 60 ಲಕ್ಷ ಹಣ ವಶ

ಹೊಸದಿಗಂತ ವರದಿ, ಕೊಪ್ಪಳ:

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಂಡಿ ಚೆಕ್ ಪೋಸ್ಟ್ ಹತ್ತಿರ ಏಪ್ರಿಲ್ 18ರಂದು 7.40 ಲಕ್ಷ ರೂ.ಮೌಲ್ಯದ 0.124088 ಕಿಲೋಗ್ರಾಂ ಬಂಗಾರವನ್ನು ಜಪ್ತಿಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುAದರೇಶ ಬಾಬು ಅವರು ತಿಳಿಸಿದ್ದಾರೆ.
ಅದೇ ರೀತಿ ಏ.18ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಫ್ಲೆöÊಯಿಂಗ್ ಸ್ಕಾ÷್ವಡ್ ತಂಡದಿAದ ದಾಖಲೆ ಇಲ್ಲದ 6.40 ಲಕ್ಷ ರೂ.ಜಪ್ತಿ ಮಾಡಲಾಗಿದೆ. ಗಂಗಾವತಿ ವಿಧಾನಸಭಾಕ್ಷೇತ್ರದ ವಿದ್ಯಾನಗರ ಚೆಕ್‌ಪೋಸ್ಟ್ನಲಿ ್ಲದಾಖಲೆ ಇಲ್ಲದ 60.50 ಲಕ್ಷ ರೂ.ಗಳನ್ನು ಚೆಕ್‌ಪೋಸ್ಟ್ನ ಅಧಿಕಾರಿಗಳು ಜಪ್ತಿ ಮಾಡಿದ್ದು ಮುಂದಿನ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ಪಟ್ಟಣದಲ್ಲಿ ದಾಖಲೆ ಇಲ್ಲದ ರೂ 1.77 ಲಕ್ಷ ರೂ. ಮತ್ತು ಬೇವೂರು ಕ್ರಾಸ್‌ನ ಹತ್ತಿರ 1.64 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಅದೇ ರೀತಿ ಮಾರ್ಚ್ 29ರಿಂದ ಏಪ್ರೀಲ್ 18ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗಳಿಂದ 33.55 ಲಕ್ಷ ರೂ. ಮೌಲ್ಯದ 4383.18 ಲೀ ಮದ್ಯ, 7.40 ಲಕ್ಷ ರೂ. ಮೌಲ್ಯದ 0.124088 ಕೆ.ಜಿ ಮಾದಕ ದ್ರವ್ಯ, 13.61 ಲಕ್ಷ ರೂ. ಮೌಲ್ಯದ 226 ಸೀರೆಗಳು, 107 ಟೀಶರ್ಟ್ಸ ಹಾಗೂ 170 ಗ್ಯಾಸ್ ಸ್ಟೌವ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 10 ಎಫ್.ಐ.ಆರ್‌ಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!