ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಕಾಂಗ್ರೆಸ್ ಎಂಎಲ್ ಸಿ ಅಶೋಕ್ ಎ ಜಗತಾಪ್ ಅಲಿಯಾಸ್ ಭಾಯ್ ಜಗತಾಪ್ ಅವರು ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಚುನಾವಣಾ ಆಯೋಗವು ಮೋದಿ ಮನೆಯ ಹೊರಗಿನ ನಾಯಿಯಂತೆ ವರ್ತಿಸುತ್ತಿದೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿರುವ ಅವರು, ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಹೇಳಿಕೆಗಳಿಗೆ ತಾನು ಯಾವತ್ತೂ ಕ್ಷಮೆ ಯಾಚಿಸಲ್ಲ ಎಂದು ತಿಳಿಸಿದ್ದಾರೆ.
ನಾನು ಹೇಳಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ಸಮಿತಿಯು ಮೋದಿ ಮತ್ತು ಇತರ ಸಚಿವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ, ನಾನು ಹೇಳಿದ್ದು ಸರಿ.” ಚುನಾವಣಾ ಆಯೋಗವು ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಅಸ್ತಿತ್ವದಲ್ಲಿದೆಯೇ ಹೊರತು ಯಾರ ಸೇವೆಗಾಗಿ ಅಲ್ಲ. ಅದಕ್ಕಾಗಿಯೇ ನಾನು ಕ್ಷಮೆಕೇಳಲ್ಲ ಎಂದಿದ್ದಾರೆ.