ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಭಾಗವಾಗಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಬುಧವಾರ ಭಾರತೀಯ ಚುನಾವಣಾ ಆಯೋಗ(ECI) ನೊಟೀಸ್ ಜಾರಿ ಮಾಡಿದೆ.
ಸೇನ್ ಅವರಿಗೆ ಜನವರಿ 16 ರಂದು ಅವರ ನಿವಾಸದಲ್ಲಿಯೇ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.
ಬೂತ್ ಮಟ್ಟದ ಅಧಿಕಾರಿ(BLO) ಇಂದು, ಬಿರ್ಭುಮ್ ಜಿಲ್ಲೆಯ ಶಾಂತಿನಿಕೇತನದ ಬೋಲ್ಪುರದಲ್ಲಿರುವ ಸೇನ್ ಅವರ ‘ಪ್ರತಿಚಿ’ ನಿವಾಸದಲ್ಲಿ ಅವರ ಸಂಬಂಧಿಕರಿಗೆ ನೊಟೀಸ್ ತಲುಪಿಸಿದ್ದಾರೆ.
ಬಿಎಲ್ಒ ಸೋಂಬ್ರತ ಮುಖರ್ಜಿ ಅವರು, ಜನವರಿ 16 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮರ್ತ್ಯ ಸೇನ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಚುನಾವಣಾ ಫಾರ್ಮ್‌ಗೆ ಸಂಬಂಧಿಸಿದ ‘ವ್ಯತ್ಯಾಸ’ಗಳನ್ನು’ ಪರಿಶೀಲಿಸಲಿದ್ದಾರೆ.
ಅಮರ್ತ್ಯ ಅವರ ಸಂಬಂಧಿ ಶಾಂತವಾನು ಸೇನ್ ಅವರು ತಮ್ಮ ವಕೀಲರಿಂದ ಅಭಿಪ್ರಾಯಗಳನ್ನು ಪಡೆದ ನಂತರ ನೊಟೀಸ್ ಅನ್ನು ಸ್ವೀಕರಿಸಿದ್ದಾರೆ.
ಆದ್ರೆ ಮತದಾರರ ಪಟ್ಟಿಯ SIR ಪ್ರಕ್ರಿಯೆಯ ಭಾಗವಾಗಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಿಗೆ ವಿಚಾರಣೆಯ ನೊಟೀಸ್ ಅನ್ನು ಇಂದು ಅವರ ಬೋಲ್ಪುರದ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ECI ತಿಳಿಸಿದೆ.

