ತೆಲಂಗಾಣ ಮಾಜಿ ಡಿಜಿಪಿ ಅಂಜನಿ ಕುಮಾರ್ ಅಮಾನತು ಆದೇಶ ಹಿಂಪಡೆದ ಚುನಾವಣಾ ಆಯೋಗ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ(Telangana Assembly Election Result)ಕ್ಕೂ ಮುನ್ನವೇ ರೇವಂತ್ ರೆಡ್ಡಿ(Revant Reddy)ಯವರನ್ನು ಭೇಟಿಯಾಗಿದ್ದ ಕಾರಣ ಅಮಾನತುಗೊಂಡಿದ್ದ ಮಾಜಿ ಡಿಜಿಪಿ ಅಂಜನಿ ಕುಮಾರ್(Anjani Kumar) ಅವರ ಅಮಾನತು ಆದೇಶವನ್ನು ಚುನಾವಣಾ ಆಯೋಗ ಹಿಂಪಡೆದಿದೆ.

ಮತ ಎಣಿಕೆ ಸಂದರ್ಭ ಅಂಜನಿ ಕುಮಾರ್ ರೇವಂತ್​ ರೆಡ್ಡಿಯನ್ನು ಭೇಟಿಯಾಗಿದ್ದರು. ರೇವಂತ್ ರೆಡ್ಡಿ ಭೇಟಿ ವಿಚಾರವಾಗಿ ಅಂಜನಿ ಕುಮಾರ್ ಅವರಿಂದ ವಿವರಣೆ ಕೇಳಿರುವ ಚುನಾವಣಾ ಆಯೋಗ ಅವರನ್ನು ಅಮಾನತುಗೊಳಿಸಿತ್ತು.

ಇನ್ನು ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಅಂಜನಿಕುಮಾರ್ ವಿವರಿಸಿದರು. ಅವರ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಚುನಾವಣಾ ಆಯೋಗ, ಅಮಾನತು ಆದೇಶವನ್ನು ಹಿಂಪಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!