Sunday, December 3, 2023

Latest Posts

ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ಬಯೋಪಿಕ್ ?

ಹೊಸ ದಿಗಂತ ವರದಿ, ಕೊಪ್ಪಳ:

ತೆಲುಗು ಚಿತ್ರರಂಗದಲ್ಲಿ ರಾಜಕಾರಣಿಗಳ ಬಯೋಪಿಕ್ ಬರುವುದು ಸಹಜ. ಆದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ
ಒಬ್ಬ ಮಾಜಿ ಮುಖ್ಯಮಂತ್ರಿಯ ಜೀವನ ಆಧಾರಿತ ಚಿತ್ರವೊಂದು ತೆರೆಗೆ ಬರಲು ಸದ್ದಿಲ್ಲದೆ ಸಿದ್ದತೆ ನಡಸಿರುವುದು ಇದೀಗ ಬಹಿರಂಗವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯಮವರ ಜೀವನಾಧಿರಿತ ಸಿನಿಮಾ ತೆರೆ ಮೇಲೆ ಅಪ್ಪಳಿಸುವ ಕುರಿತು ಸುದ್ದಿಗಳು ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಕೆಲ ನಿರ್ಮಾಪಕರು, ನಿರ್ದೇಶಕರು, ಸಿದ್ದು ಅನುಯಾಯಿಗಳು ಸಿನಿಮಾ ತೆಗೆಯುವುದಕ್ಕೆ ಉತ್ಸುಕರಾಗಿದ್ದಾರೆಯಾದರೂ ಸಿದ್ದರಾಮಯ್ಯನವರು ತಮ್ಮ ಜೀವನಾಧಾರಿತ ಚಿತ್ರ ನಿರ್ಮಾನಕ್ಕೆ ಒಪ್ಪಿಗೆ ನೀಡಿಲ್ಲ.
ಆದರೆ, ಜಿಲ್ಲೆಯ ಕನಕಗಿರಿ ಕ್ಷೇತ್ರದ ಸಿದ್ದು ಅಭಿಮಾನಿಗಳು ವಿಧಾನಸಭಾ ಚುನಾವಣೆಗೂ ಮುನ್ನವೇ ಸಿನಿಮಾ ತೆಗೆದು ರಾಜ್ಯದ ಜನತೆಗೆ ಸಿದ್ದು ಅವರ ಜೀನವ ಪರಿಚಯಿಸಬೇಕೆಂದು ಇಂತಹದೊಂದು ಚಿಂತನೆ ನಡೆಸಿದ್ದಾರೆ.
ಇದಕ್ಕೆ ಗಂಗಾವತಿ ತಾಲೂಕಿನ ಕನಕಗಿರಿ ಕ್ಷೇತ್ರದ ಹೆಬ್ಬಾಳ ಗ್ರಾಮದ ನಿರ್ಮಾಪಕ ಹಯಾತ್ ಪೀರ್ ಮತ್ತು ಕೆಲ ಸಿದ್ದು ಅಭಿಮಾನಿಗಳು ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
ಎಂಎಸ್ ಕ್ರೀಯೆಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣಕ್ಕೆ ಸಿದ್ದತೆ ನಡಸಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಜೀವನಾಧಿರಿತ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸ ವಿದೆ. ನಾವು ವಿಧಾನಸಭಾ ಚುನಾವಣೆಗೂ ಮುನ್ನವೇ ಸಿನಿಮಾ ತೆಗೆದು ರಾಜ್ಯಕ್ಕೆ ಅವರ ಜೀವನ ಪರಿಚಯಿಸಲಿದ್ದೇವೆ ಎಂದು ಚಿತ್ರದ ನಿರ್ಮಾಪಕ ಹಯಾತ್ ಪೀರ್ ಹೊಸದಿಗಂತಕ್ಕೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!